ಚೆನ್ನೈ, ಮೇ 25-ಹದಿಮೂರು ಜನ ಬಲಿಯಾದ ತುತ್ತುಕೂಡಿ ಗೋಲಿಬಾರ್ ಪ್ರಕರಣ ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ಕೆ. ಪನ್ನೀರ್ ಸೆಲ್ವಂ ರಾಜೀನಾಮೆಗೆ ಆಗ್ರಹಿಸಿ ಡಿಎಂಕೆ ನೇತೃತ್ವದ ವಿರೋಧಪಕ್ಷಗಳು ಇಂದು ತಮಿಳುನಾಡು ಬಂದ್ ಆಚರಿಸಿದವು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ರಾಜ್ಯವ್ಯಾಪಿ ಬಂದ್ ಬಹುತೇಕ ಶಾಂತಿಯುತವಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ರಾಜಧಾನಿ ಚೆನ್ನೈ ಸೇರಿದಂತೆ ವಿವಿಧ ನಗರಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಕೆಲವು ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಸರ್ಕಾರಿ ಬಸ್ಗಳ ಸಂಚಾರ ಎಂದಿನಂತಿತ್ತು. ಬಂದ್ ಪ್ರಯುಕ್ತ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.
ಡಿಎಂಕೆ, ಅದರ ಮಿತ್ರ ಪಕ್ಷಗಳಾದ ಕಾಂಗ್ರೆಸ್. ಐಯುಎಂಎಲ್, ಎಂಡಿಎಂಕೆ, ವಿಸಿಕೆ, ಸಿಪಿಐ, ಸಿಪಿಐ(ಎಂ) ಹಾಗೂ ಎಂಎಂಕೆ ಮುಖಂಡರು ಮತ್ತು ಕಾರ್ಯಕರ್ತರು ತಮಿಳುನಾಡಿನ ವಿವಿಧ ಭಾಗಗಳು ಮತ್ತು ನೆರೆಯಲ್ಲಿರುವ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬಂದ್ ಆಚರಿಸಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಪಳನಿಸ್ವಾಮಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಎಗ್ನಮೊರ್ ಮತ್ತು ಸೈದಾಪೇಟ್ಗಳಲ್ಲೂ ಹರತಾಳ ನಡೆಯಿತು.
ಚೆನ್ನೈ ಮಾಜಿ ಮೇಯರ್ ಮತ್ತು ಡಿಎಂಕೆ ನಾಯಕ ಎಂ. ಸುಬ್ರಮಣಿಯನ್, ರಾಜ್ಯಸಭಾ ಸದಸ್ಯ ಕನಿಮೋಳಿ, ವಿಸಿಕೆ ಮುಖ್ಯಸ್ಥ ತಿರುಮಾವಳನ್, ಎಂಎಂಕೆ ನಾಯಕ ಎಂ.ಎಚ್.ಜವಾಹಿರುಲ್ಲಾ ಮತ್ತಿತರ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮೇ 22 ಮತ್ತು 23ರಂದು ಟ್ಯುಟಿಕಾರನ್(ತುತ್ತುಕೂಡಿ)ನಲ್ಲಿ ಸ್ಟೆರಿಲೈಸ್ ಘಟಕದ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಪೆÇಲೀಸ್ ಗೋಲಿಬಾರ್ನಲ್ಲಿ 13 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.