ಪಾಟ್ನಾ, ಮೇ 25-ಬೌದ್ಧ ಸನ್ಯಾಸಿಗಳೂ ಸೇರಿದಂತೆ ಅನೇಕರನ್ನು ಗಾಯಗೊಳಿಸಿದ ಬಿಹಾರದ ಬೋಧ್ ಗಯಾ ಸರಣಿ ಸ್ಫೋಟ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್(ಐಎಂ) ಉಗ್ರಗಾಮಿ ಸಂಘಟನೆಯ ಐವರು ಭಯೋತ್ಪಾದಕರನ್ನು ವಿಶೇಷ ಎನ್‍ಐಎ ನ್ಯಾಯಾಲಯ ಇಂದು ತಪ್ಪಿತಸ್ಥರು ಎಂದು ಘೋಷಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ವಿಶೇಷ ನ್ಯಾಯಾಧೀಶರಾದ ಮನೋಜ್ ಕುಮಾರ್ ಸಿನ್ಹಾ ಇಂದು ಐವರು ಉಗ್ರರನ್ನು ದೋಷಿಗಳು ಎಂದು ಘೋಷಿಸಿದರು.
ಭಾರತೀಯ ದಂಡ ಸಂಹಿತೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆ ಹಾಗೂ ಸ್ಪೋಟಕಗಳ ಅಧಿನಿಯಮದ ವಿವಿಧ ಸೆಕ್ಷನ್‍ಗಳ ಅನ್ವಯ ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ, ಮುಜಿಬ್ ಉಲ್ಲಾ, ಒಮರ್ ಸಿದ್ದಿಖಿ ಹಾಗೂ ಅಜರುದ್ದೀನ್ ಖುರೇಷಿ-ಈ ಐವರು ಉಗ್ರರನ್ನು ತಪ್ಪಿಸ್ಥರನ್ನಾಗಿ ಘೋಷಿಸಲಾಗಿದೆ.
ಇವರ ಶಿಕ್ಷೆಯ ಪ್ರಮಾಣವನ್ನು ಮೇ 31ರಂದು ನ್ಯಾಯಾಲಯ ಪ್ರಕಟಿಸಲಿದೆ.
ಬಿಹಾರದ ಪ್ರಸಿದ್ಧ ಯಾತ್ರಾ ಸ್ಥಳ ಬೋಧ್ ಗಯಾದಲ್ಲಿ ಜುಲೈ 7, 2013ರಂದು ಬೆಳಗ್ಗೆ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ದಾಳಿಯಲ್ಲಿ ಬೌದ್ಧ ಬಿಕ್ಕುಗಳೂ ಸೇರಿದಂತೆ ಅನೇಕರು ಗಾಯಗೊಂಡಿದ್ದರು.