
ಮೈಸೂರು, ಮೇ 24- ಪ್ರೀತಿಸುತ್ತಿದ್ದ ಹುಡುಗ ನಿಂದಿಸಿದ್ದಕ್ಕೆ ಮನನೊಂದ ಯುವತಿ ಸಾವಿಗೆ ಶರಣಾಗಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳವಾಡಿಯ ನಿವಾಸಿ ಧನ್ಯ(19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಧನ್ಯ ಮೇಟಗಳ್ಳಿ ನಿವಾಸಿ ದೀನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ಧನ್ಯಾಳ ಪೆÇೀಷಕರು ದೀನ್ನನ್ನು ಮನೆಗೆ ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಈ ವಿಷಯವನ್ನು ಧನ್ಯ ಪ್ರಿಯಕರ ದೀನ್ಗೆ ತಿಳಿಸಿದ್ದಾಳೆ. ಈ ನಡುವೆ ಇಬ್ಬರ ನಡುವೆ ಜಗಳ ನಡೆದಿದ್ದು, ಧನ್ಯಾಳ ತಂದೆ ನಡೆಸುತ್ತಿದ್ದ ಅಂಗಡಿ ಮುಂದೆ ದೀನ್ ಆಕೆಯನ್ನು ನಿಂದಿಸಿದ್ದಾನೆ. ಇದರಿಂದ ಮನನೊಂದು ಧನ್ಯ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಬಗ್ಗೆ ವಿಜಯನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.