ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ದಿನನಿತ್ಯದ ವಿದ್ಯಮಾನ:

ನವದೆಹಲಿ, ಮೇ 23-ಗ್ರಾಹಕರ ಹಿಡಿಶಾಪದ ನಡುವೆಯೂ ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಏರಿಕೆ ದಿನನಿತ್ಯದ ವಿದ್ಯಮಾನವಾಗಿದೆ.
ಇಂಧನ ದರ ಕಡಿಮೆ ಮಾಡಲು ಕೇಂದ್ರ ಸಾಕಷ್ಟು ಕಸರತ್ತು ನಡೆಸುತ್ತಿದೆ. ದೆಹಲಿ, ಮುಂಬೈ, ಕೋಲ್ಕತಾ, ಮತ್ತು ಚೆನ್ನೈ ಮಹಾನಗರಗಳೂ ಸೇರಿದಂತೆ ಹತ್ತನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂಧನ ದರ ಏರಿಕೆಗೆ 19 ದಿನಗಳ ಕಾಲ ಬ್ರೇಕ್ ಹಾಕಿದ್ದ ಕೇಂದ್ರ ಸರ್ಕಾರ, ನಂತರ ಹೆಚ್ಚಳ ಮಾಡಿತ್ತು. ಅದು ಏರುಗತಿಯಲ್ಲೇ ಮುಂದುವರಿದಿದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳ ಹೆಚ್ಚಳದಿಂದಾಗಿ ಸರ್ಕಾರಿ ಸ್ವಾಮ್ಯದ ಆಯಿಲ್ ಕಂಪನಿಗಳು ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿದೆ.
ಇಂಧನ ದರ ನಿಗದಿ ಹೇಗೆ ?
ಕೇಂದ್ರ ಸರ್ಕಾರದ ಜಿಎಸ್‍ಟಿ ಚೌಕಟ್ಟಿನಿಂದ ಇಂಧನ ದರಗಳನ್ನು ಹೊರತುಪಡಿಸಲಾಗಿದೆ. ಅಬಕಾರಿ ಸುಂಕದಲ್ಲಿ ಅತ್ಯಲ್ಪ ಕಡಿತ ಮಾಡಿದ್ದರೂ, ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದೆ.
ಕಳೆದ 15 ತಿಂಗಳಲ್ಲಿ ಇಂಧನ ದರ ಹೆಚ್ಚಳಕ್ಕೆ ಕಾರಣಗಳು :
* ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‍ಗೆ 45 ಡಾಲರ್‍ಗಳಿಂದ 71 ಡಾಲರ್‍ಗಳಿಗೆ ಏರಿಕೆ
* ಪ್ರತಿ ಲೀಟರ್ ಪೆಟೋಲ್ ಮತ್ತು ಡೀಸೆಲ್‍ಗೆ ಪೆಟ್ರೋಲ್ ಪಂಪ್ ಕಮಿಷನ್ 1 ರೂ.ಗೆ ಹೆಚ್ಚಳ.
* 2018ರ ಬಜೆಟ್ ಮಂಡನೆ ನಂತರ ಸರ್ಕಾರವು ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‍ಗೇ 2 ರೂ.ಗಳನ್ನು ಕಡಿತಗೊಳಿಸಿತ್ತು. ನಂತರ ಅದು 6 ರೂ.ಗಳಿಗೆ ಇಳಿಯಿತು. ಆದರೆ ಪ್ರತಿ ಲೀಟರ್‍ಗೆ 8 ರೂ.ಗಳ ರಸ್ತೆ ತೆರಿಗೆ ಈಗ ವಿಧಿಸಲಾಗಿದೆ. ಜೊತೆಗೆ ಅಂತಾರಾಷ್ಟೀಯ ಕಚ್ಚಾ ತೈಲಗಳ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಪೆಟ್ರೋಲ್ ಮತ್ತು ಡೀಸೆಲ್-ಕಚ್ಚಾ ತೈಲ ಲೆಕ್ಕಾಚಾರ :
ಅಂತಾರಾಷ್ಟ್ರೀಯ ಕಚ್ಚಾ ತೈಲ ನಿಗದಿ ಬಗ್ಗೆ ಗಮನಹರಿಸಿದರೆ, ಇದು ಪ್ರತಿ ಬ್ಯಾರೆಲ್‍ಗೆ 71 ಡಾಲರ್‍ಗಳಷ್ಟು ಏರಿಕೆಯಾಗಿದ್ದು, ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ತೈಲ ಆಮದು ಮಾಡಿಕೊಳ್ಳಬೇಕಾದರೆ ಬ್ಯಾರೆಲ್ ವೆಚ್ಚ+1.5 ಡಾಲರ್‍ಗಳ ಹಡಗು ಸುಂಕ ಪಾವತಿಸಬೇಕು. ಇವೆಲ್ಲಾ ಸೇರಿ ಪ್ರತಿ ಬ್ಯಾರೆಲ್‍ಗೆ 72.5 ಡಾಲರ್‍ಗಳಷ್ಟು ಆಮದು ವೆಚ್ಚವಾಗುತ್ತದೆ. ಇದು ಭಾರತೀಯ ರೂ.ಗಳಲ್ಲಿ 4,930 ರೂ.ಗಳಿಗೆ ಸಮ.
* ಬ್ಯಾರೆಲ್ ಕಚ್ಚಾ ತೈಲವು 159 ಲೀಟರ್‍ಗಳಿಗೆ ಸಮ.
* ಭಾರತೀಯ ಕರೆನ್ಸಿಯಲ್ಲಿ ಕಚ್ಚಾ ತೈಲ ಬೆಲೆ 4930 ರೂ.ಗಳು/159 = ಪ್ರತಿ ಲೀಟರ್‍ಗೆ 31 ರೂ.ಗಳಾಗುತ್ತವೆ.

ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಿಗೆ ಸರಳೀಕೃತ ಲೆಕ್ಕಾಚಾರ ಕೋಷ್ಟಕ

ಪೆಟ್ರೋಲ್ ದರಡೀಸೆಲ್ ದರ ಲೆಕ್ಕಾಚಾರ
ಸಾಗರ ಸುಂಕದೊಂದಿಗೆ ಕಚ್ಚಾ ತೈಲದ ಅಂತಾರಾಷ್ಟ್ರೀಯ ದರ (20ನೇ ಮೇ 2018ರಂತೆ)
ಪ್ರತಿ ಬ್ಯಾರೆಲ್‍ಗೆ 72.5 ಡಾಲರ್ ಅಥವಾ 4930 ರೂ.ಗಳು
ಪ್ರತಿ ಬ್ಯಾರೆಲ್‍ಗೆ 72.5 ಡಾಲರ್ ಅಥವಾ 4930 ರೂ.ಗಳು

1 ಬ್ಯಾರೆಲ್ ಕಚ್ಚಾ ತೈಲ್
159 ಲೀಟರ್‍ಗಳು
159 ಲೀಟರ್‍ಗಳು

ಕಚ್ಚಾ ತೈಲ-ಪ್ರತಿ ಲೀಟರ್ ವೆಚ್ಚ
ಪ್ರತಿ ಲೀಟರ್‍ಗೆ 31 ರೂ.ಗಳು
ಪ್ರತಿ ಲೀಟರ್‍ಗೆ 31 ರೂ.ಗಳು

ಮೂಲ ಒಎಂಸಿ ವೆಚ್ಚ ಲೆಕ್ಕಾಚಾರ

ಪ್ರವೇಶ ಶುಲ್ಕ, ಸಂಸ್ಕರಣೆ, ಇಳಿಕೆ ವೆಚ್ಚ ಮತ್ತು ಇತರ ಕಾರ್ಯನಿರ್ವಹಣಾ ವೆಚ್ಚಗಳು
ಪ್ರತಿ ಲೀಟರ್‍ಗೆ 2.62 ರೂ.ಗಳು
ಪ್ರತಿ ಲೀಟರ್‍ಗೆ 5.91 ರೂ.ಗಳು

ಓಎಂಸಿ ಲಾಭ, ಸಾರಿಗೆ ಮತ್ತು ಸುಂಕ ವೆಚ್ಚ
ಪ್ರತಿ ಲೀಟರ್‍ಗೆ 3.31 ರೂ.ಗಳು
ಪ್ರತಿ ಲೀಟರ್‍ಗೆ 2.87 ರೂ.ಗಳು

ಸಂಸ್ಕರಣ ವೆಚ್ಚದ ನಂತರ ಮೂಲ ವೆಚ್ಚ
ಪ್ರತಿ ಲೀಟರ್‍ಗೆ 36.93 ರೂ.ಗಳು
ಪ್ರತಿ ಲೀಟರ್‍ಗೆ 39.78 ರೂ.ಗಳು

ಹೆಚ್ಚುವರಿ : ಅಬಕಾರಿ ಸುಂಕ+ಕೇಂದ್ರ ಸರ್ಕಾರ ವಿಧಿಸುವ ರಸ್ತೆ ಕರ
ಪ್ರತಿ ಲೀಟರ್ ಪೆಟ್ರೋಲ್‍ಗೆ 19.48 ರೂ.ಗಳು
ಪ್ರತಿ ಲೀಟರ್ ಡೀಸೆಲ್‍ಗೆ 15.33 ರೂ.ಗಳು

ವ್ಯಾಟ್‍ಗೆ ಮುನ್ನ ಡೀಲರ್‍ಗಳ ಮೇಲೆ ವಿಧಿಸುವ ದರಗಳು
ಪ್ರತಿ ಲೀಟರ್‍ಗೆ 56.41 ರೂ.ಗಳು
ಪ್ರತಿ ಲೀಟರ್‍ಗೆ 55.11 ರೂ.ಗಳು

ಡೀಲರ್‍ಗಳ ರೀಟೈಲ್ ದರ ಲೆಕ್ಕಾಚಾರ-

ಪೆಟ್ರೋಲ್ ಪಂಪ್ ಡೀಲರ್‍ಗಳ ಕಮಿಷನ್
ಪ್ರತಿ ಲೀಟರ್‍ಗೆ 3.62 ರೂ.ಗಳು
ಪ್ರತಿ ಲೀಟರ್‍ಗೇ 2.52 ರೂ.ಗಳು.

ವ್ಯಾಟ್‍ಗೆ ಮುನ್ನ ಇಂಧನ ವೆಚ್ಚ
ಪ್ರತಿ ಲೀಟರ್‍ಗೆ 60.03 ರೂ.ಗಳು
ಪ್ರತಿ ಲೀಟರ್‍ಗೆ 57.63 ರೂ.ಗಳು

ಹೆಚ್ಚುವರಿ : ವ್ಯಾಟ್ (ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಿರುತ್ತದೆ-ಪೆಟ್ರೋಲ್ ಮೇಲೆ ಶೇ.27 ಹಾಗೂ ಡೀಸೆಲ್ ಮೇಲೆ ಶೇ.16.75+ಸರ್‍ಚಾರ್ಜ್‍ನೊಂದಿಗೆ ಮಾಲಿನ್ಯ ಸುಂಕ)
ಪ್ರತಿ ಲೀಟರ್ ಪೆಟ್ರೋಲ್‍ಗೆ 16.21 ರೂ.ಗಳು
ಪ್ರತಿ ಲೀಟರ್ ಡೀಸೆಲ್‍ಗೆ 9.91 ರೂ.ಗಳು.

20ನೇ ಮೇ 2018ರಂದೆ ಅಂತಿಮ ರಿಟೈಲ್ ದರ (ಲೆಕ್ಕಾಚಾರ)
ಪ್ರತಿ ಲೀಟರ್‍ಗೆ 76.24ರೂ.ಗಳು
ಪ್ರತಿ ಲೀಟರ್‍ಗೆ 67.54 ರೂ.ಗಳು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ