ಜನತೆಯ ಸೇವೆಗೆ ದೊರೆತ ದೊಡ್ಡ ಜವಾಬ್ದಾರಿ: ಡಿಸಿಎಂ ಹುದ್ದೆ ಕುರಿತು ಪರಮೇಶ್ವರ್‌ ಮಾತು

ಬೆಂಗಳೂರು,ಮೇ 23

ಉಪ ಮುಖ್ಯಮಂತ್ರಿ ಹುದ್ದೆ ಎನ್ನುವುದಕ್ಕಿಂತ ರಾಜ್ಯದ ಜನತೆಯ ಸೇವೆಗೆ ದೊರೆತ ದೊಡ್ಡ ಜವಾಬ್ದಾರಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡ ಇಂದು ಬೆಳಗ್ಗೆ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮನೆಗೆ ವಾಪಾಸಾದ ಸಂದರ್ಭ ಮಾಧ್ಯಮದವರ ಜತೆ ಮಾತನಾಡಿ, ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕೆ ಪರಿಹಾರ ಹುಡುಕಬೇಕಿದೆ. ಎರಡು ಪಕ್ಷಗಳ ನಡುವೆ ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಬೇಕು. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಾವು ಎರಡೂ ಪಕ್ಷಗಳು ಒಂದಾಗಿ ಕೆಲಸ ಮಾಡುತ್ತೇವೆ ಎಂದರು.
ಅರ್ಹತೆ ಇರುವವರು ಕೇಳುತ್ತಾರೆ
ಸ್ವಾಭಾವಿಕವಾಗಿ ಅರ್ಹತೆ ಇರುವವರು ಡಿಇಎಂ ಹುದ್ದೆ ಕೇಳಿದ್ದಾರೆ. ಅದು ತಪ್ಪಲ್ಲ. ಆದರೆ ವರಿಷ್ಠರು ತೀರ್ಮಾನ ಮಾಡಿ ನನಗೆ ಇಂದು ಕುಮಾರಸ್ವಾಮಿ ಜತೆ ಪ್ರಮಾಣ ವಚನ ಸ್ವೀಕರಿಸುವುದು ಎಂದು ತೀರ್ಮಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಹೇಳಿದ್ದಾರೆ.
ಅಭಿಮಾನಿಗಳ ಭೇಟಿ, ದೇಗುಲ ದರ್ಶನ
ಇಂದು ಬೆಳಗ್ಗೆಯೇ ಸದಾಶಿವನಗರದ ಡಾ. ಜಿ. ಪರಮೇಶ್ವರ್ ನಿವಾಸ ಎದುರು ಅಭಿಮಾನಿಗಳ ದಂಡೇ ಸೇರಿತ್ತು. ಅವರೊಂದಿಗೆ ಕೆಲ ಕಾಲ ಸಮಾಲೋಚಿಸಿದ ಪರಮೇಶ್ವರ್ ನಂತರ ಆರ್.ಟಿ. ನಗರದಲ್ಲಿರುವ ಗಣಪತಿ ದೇವಾಲಯಕ್ಕೆ ತೆರಳಿದ್ದರು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಪಟ್ಟ ನೀಡುವ ಚರ್ಚೆ ಬಗ್ಗೆ ಕೂಡ ಅವರು ಪರೋಕ್ಷವಾಗಿ ಪ್ರಸ್ತಾಪಿಸಿದರು. ಆದರೆ ಇಂದು ಅವರಾಡಿದ ಮಾತಿನಲ್ಲಿ ಡಿಸಿಎಂ ಹುದ್ದೆಗೆ ಸಾಕಷ್ಟು ಸ್ಪರ್ಧೆ ಇತ್ತು. ಅಂತಿಮವಾಗಿ ಈಗ ನನ್ನನ್ನು ಆಯ್ಕೆ ಮಾಡಿದ್ದಾರೆ. ಇಬ್ಬರು ಡಿಸಿಎಂ ವಿಚಾರ ಸದ್ಯ ಪ್ರಸ್ತಾಪವಾಗಿಲ್ಲ. ಮುಂದೆ ಅಗತ್ಯ ಬಂದಲ್ಲಿ ಈ ಬಗ್ಗೆ ಚರ್ಚೆ ನಡೆಯಬಹುದು ಎಂದು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ