ನಗರದ ಹೃದಯ ಭಾಗದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯಲ್ಲಿ ಮೊಸಳೆ ಪ್ರತ್ಯಕ್ಷ!

ಹುಣಸೂರು, ಮೇ 23- ನಗರದ ಹೃದಯ ಭಾಗದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ನಾಗರಿಕರಲ್ಲಿ ಆತಂಕ ಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆಯಾದ್ದರಿಂದ ನೀರಿನ ಪ್ರಮಾಣವು ಕಡಿಮೆಯಾಗಿರುವುದರೊಂದಿಗೆ ಈಗಾಗಲೇ ನದಿಯು ತ್ಯಾಜ್ಯ ಕಲ್ಮಶಗಳಿಂದ ತುಂಬಿ ಕೊಳಕುಗೊಂಡಿರುವುದರಿಂದ ನದಿ ಮಧ್ಯದಲ್ಲಿರುವ ಬಂಡೆಗಳ ಮೇಲೆ ಮೊಸಳೆ ಕಂಡಿದೆ. ಮೊಸಳೆಯ ದೃಶ್ಯವನ್ನು ವ್ಯಕ್ತಿಯೊಬ್ಬ ಸೆರೆ ಹಿಡಿದು ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದು ಇದೀಗ ವೈರಲ್ ಆಗಿದೆ.
ಸೆರೆ ಹಿಡಿಯುವಂತೆ ಒತ್ತಾಯ : ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಮೊಸಳೆಯ ಪೆÇೀಟೋವನ್ನು ಕಂಡ ನಾಗರೀಕರು ಮೊಸಳೆಯನ್ನು ಅರಣ್ಯ ಇಲಾಖೆಯು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರಲ್ಲದೆ ತಂಡೋಪ ತಂಡವಾಗಿ ನದಿ ಪಾತ್ರದಲ್ಲಿ ಮೊಸಳೆಯನ್ನು ನೋಡುವ ತವಕದಲ್ಲಿ ನದಿಯನ್ನು ಇಣುಕಿ ನೋಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ