ಮಂಡ್ಯ, ಮೇ 22- ಪ್ರಸಿದ್ಧ ಕಾಲಭೆರವೇಶ್ವರ ದೇವಾಲಯದ ಹುಂಡಿ ಒಡೆದು ಹಣ ಕಳವು ಮಾಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ಬಸರಾಳು ಗ್ರಾಮದ ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಸುಮಾರು ಒಂದು ಲಕ್ಷ ರೂ.ಗಳನ್ನು ಕಳ್ಳರು ದೋಚಿದ್ದಾರೆ ಎಂದು ದೇವಾಲಯದ ಅರ್ಚಕ ಪೆÇಲೀಸರಿಗೆ ದೂರು ನೀಡಿದ್ದಾರೆ. ಇಂದು ಬೆಳಗ್ಗೆ ದೇವಾಲಯದ ಬಾಗಿಲು ತೆರೆಯಲು ಬಂದಾಗ ದೇವಾಲಯದ ಬಾಗಿಲು ಒಡೆದು ಹುಂಡಿಯಲ್ಲಿನ ಹಣ ದೋಚಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಬಸರಾಳು ಠಾಣೆಗೆ ದೂರು ನೀಡಲಾಗಿದೆ. ಕಳೆದ ಎರಡು ತಿಂಗಳ ಹಿಂದಷ್ಟೆ ಇದೇ ದೇವಾಲಯದ ಹುಂಡಿ ದೋಚಲಾಗಿತ್ತು.