
ನವದೆಹಲಿ, ಮೇ 22-ಗುಜರಾತ್‍ನ ರಾಜ್‍ಕೋಟ್‍ನಲ್ಲಿ ದಲಿತ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣ ಬಗ್ಗೆ ಕುಪಿತಗೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‍ಎಚ್‍ಆರ್‍ಸಿ) ಈ ಸಂಬಂಧ ಗುಜರಾತ್ ಸರ್ಕಾರಕ್ಕೆ ಇಂದು ನೋಟಿಸ್ ಜಾರಿಗೊಳಿಸಿದೆ.
ರಾಜ್‍ಕೋಟ್ ಹೊರವಲಯದ ಶಾಪರ್ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದ ಮುಂದೆ ಕಳ್ಳನೆಂಬ ಗುಮಾನಿ ಮೇಲೆ 30 ವರ್ಷ ಚಿಂದಿ ಆಯುವ ವನಿಯಾ ಎಂಬ ದಲಿತನನ್ನು ಐವರು ಯುವಕರು ದೊಣ್ಣೆಗಳಿಂದ ಬಡಿದು ಕೊಂದರು. ಈ ದೃಶ್ಯ ವೈರಲ್ ಆಗಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತು.
ಈ ಬಗ್ಗೆ ಆಕ್ರೋಶಗೊಂಡ ಆಯೋಗವು ಗುಜರಾತ್‍ನ ಬಿಜೆಪಿ ಸರ್ಕಾರಕ್ಕೆ ನೋಟಿಸ್ ನೀಡಿ, ಇಂಥ ಘಟನೆಗಳು ಮರುಕಳಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಕೋರಿದೆ.