ನವದೆಹಲಿ/ಚಂಡಿಗಢ, ಮೇ 22-ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರ ಸಹಕಾರದೊಂದಿಗೆ ಗೋಧಿ ಕಣಜ ಪಂಜಾಬ್ ಮೇಲೂ ಖಲಿಸ್ತಾನ್ ಭಯೋತ್ಪಾದಕರು ವಕ್ರದೃಷ್ಟಿ ಬೀರಿದ್ದಾರೆ.
ಪಂಜಾಬ್ನ ಧಾರ್ಮಿಕ ನಾಯಕರು ಮತ್ತು ಪೆÇಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಲು ಖಲಿಸ್ತಾನ್ ಪರ ಬಣಗಳು ಐಎಸ್ ಉಗ್ರರ ಜೊತೆ ಕುತಂತ್ರ ರೂಪಿಸುತ್ತಿವೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.
ಪಂಜಾಬ್ನಲ್ಲಿ ಬಂಧಿತರಾಗಿರುವ ಭಯೋತ್ಪಾದಕರನ್ನು ವಿಚಾರಣೆಗೆ ಒಳಪಡಿಸಿರುವ ಪೆÇಲೀಸ್ ಅಧಿಕಾರಿಗಳ ಪಟ್ಟಿಗಳನ್ನು ಪರಿಶೀಲಿಸುತ್ತಿರುವ ಖಲಿಸ್ತಾನ ಉಗ್ರರು ಅವರ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ. ಅಲ್ಲದೇ ವಿದೇಶಗಳಲ್ಲಿ ನೆಲೆಸಿರುವ ಅಥವಾ ವ್ಯಾಸಂಗ ಮಾಡುತ್ತಿರುವ ಪೆÇಲೀಸ್ ಅಧಿಕಾರಿಗಳ ಕುಟುಂಬದ ಸದಸ್ಯರ ಬಗ್ಗೆಯೂ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಕೆನಡಾ, ಅಮೆರಿಕ, ಬ್ರಿಟನ್ ಮತ್ತು ಯುರೋಪ್ನಲ್ಲಿ ವಿಶೇಷವಾಗಿ ಪಂಜಾಬ್ ಪೆÇಲೀಸ್ ಅಧಿಕಾರಿಗಳು ಕುಟುಂಬದ ಸದಸ್ಯರು ನೆಲೆಸಿದ್ದಾರೆ. ಇವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂಬ ಸಂಗತಿಯನ್ನು ಗುಪ್ತಚರ ಸಂಸ್ಥೆ ಕೇಂದ್ರ ಮತ್ತು ರಾಜ್ಯ ಗೃಹ ಸಚಿವಾಲಯಗಳಿಗೆ ತಿಳಿಸಿದೆ.
ಇದಕ್ಕಾಗಿ ಸ್ಥಳೀಯ ಯುವಕರನ್ನು ಖಲಿಸ್ತಾನ್ ಮತ್ತು ಐಎಸ್ ಉಗ್ರರು ಬಳಸಿಕೊಳ್ಳುತ್ತಿದ್ದಾರೆ. ಒಂದೆಡೆ ಪೆÇಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿರುವ ಉಗ್ರರು, ಇನ್ನೊಂದೆಡೆ ಪಂಜಾಬ್ನ ಧಾರ್ಮಿಕ ನಾಯಕರನ್ನು ಕೊಂದು ರಾಜ್ಯದಲ್ಲಿ ಶಾಂತಿ ಕದಡಲು ಕುತಂತ್ರ ರೂಪಿಸಿದ್ದಾರೆ ಎಂಬ ವರದಿಗಳಿವೆ.
ಖಲಿಸ್ತಾನ್ ಮತ್ತು ಐಎಸ್ ಉಗ್ರರು ಈಗಾಗಲೇ ರಾಜ್ಯವನ್ನು ಅಸ್ಥಿರಗೊಳಿಸಲು ಕುಖ್ಯಾತ ರೌಡಿಗಳು ಮತ್ತು ಅಪರಾಧಿಗಳನ್ನು ಸಂಪರ್ಕಿಸಿ ಈಗಾಗಲೇ ಮಾತುಕತೆ ನಡೆಸಿವೆ ಎಂಬ ವರದಿಯೂ ಬಯಲಾಗಿದೆ.
ಇಂಗ್ಲೆಂಡ್ ಖಲಿಸ್ತಾನ ಬಣದ ಕೇಂದ್ರ ಸ್ಥಾನವಾಗಿದ್ದು, ಕಳೆದ ಏಪ್ರಿಲ್ನಲ್ಲಿ ನ್ಯೂಯಾರ್ಕ್ನಲ್ಲಿ ಈ ಸಂಘಟನೆಯ ರಹಸ್ಯ ಸಭೆ ನಡೆದಿದ್ದು, ಭಾರತ, ಪಾಕಿಸ್ತಾನ, ಜರ್ಮನಿ, ಇಂಗ್ಲೆಂಡ್, ಅಮೆರಿಕ, ಕೆನಡಾದಲ್ಲಿನ ಖಲಿಸ್ತಾನ ಬಣದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಈ ವಿಧ್ವಂಸಕ ಕೃತ್ಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.