ರೈತರ ಸಾಲ ಮನ್ನಾ ವಿಷಯದಲ್ಲಿ ಹೆಚ್‌ಡಿಕೆ ನೀಡಿದ ಗೊಂದಲದ ಹೇಳಿಕೆ ಏನು?

ಮಂಗಳೂರು,ಮೇ 22

ನನ್ನ ತಂದೆಯವರು ಧರ್ಮಸ್ಥಳ ಕ್ಷೇತ್ರದ ಭಕ್ತರು. ನನಗೆ ದೇವರ ಅನುಗ್ರಹ ಇದೆ. ಸಮ್ಮಿಶ್ರ ಸರ್ಕಾರಕ್ಕೆ ದೈವ ಪ್ರೇರಣೆ ಇದೆ. ಹಾಗಾಗಿ ದೇವರ ದರ್ಶನ ಮತ್ತು ಗುರು ಹಿರಿಯ ಆಶೀರ್ವಾದ ಪಡೆಯುತ್ತಿದ್ದೇನೆ ಎಂದು ನಿಯೋಜಿತ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ನಾಡಿನ‌ ನಿರೀಕ್ಷೆಗಳ ಬಗ್ಗೆ ದೇವರ ಬಳಿ ಪ್ರಾರ್ಥನೆ ಮಾಡಿರುವೆ. ನಾಡಿನಲ್ಲಿ ರೈತರಿಗೆ ಉತ್ತಮವಾದ ಮಳೆ-ಬೆಳೆ ಬಂದು ನಾಡಿನ ಸಮಸ್ಯೆಗಳು ಪರಿಹಾರವಾಗಬೇಕೆಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಣಾಳಿಕೆ ಜಾರಿಗೆ ಆರ್ಥಿಕವಾಗಿ ಸದೃಢವಾಗಬೇಕು. ಆರ್ಥಿಕ ಸ್ಥಿತಿ ಒಳ್ಳೆದಾಗಲೆಂದು ದೇವರ ಅನುಗ್ರಹ ಬೇಡಿದ್ದೇನೆ. ರೈತರ ಸಾಲ ಮನ್ನಾ ಕುರಿತು ಮಾತನಾಡಿದ ಹೆಚ್‌ಡಿಕೆ, ನನಗೆ ಸಂಪೂರ್ಣ ಬಹುಮತ ಕೊಟ್ಟಿಲ್ಲ. ಪೂರ್ಣ ಬಹುಮತ ಕೊಟ್ಟಿದ್ದರೆ ಸಂಪೂರ್ಣ ಸಾಲ ಮನ್ನಾ ಎಂದಿದ್ದೆ. ಆದರೆ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುವೆ ಎನ್ನುವ ಮೂಲಕ ಸಾಲ ಮನ್ನಾ ಕುರಿತು ಗೊಂದಲದ ಹೇಳಿಕೆ ನೀಡಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ