ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ವಿಚಾರಣೆ ಚುರುಕು:

ಪುತ್ರಜಯ, ಮೇ 22-ಭಾರೀ ಲಂಚಾವತಾರಗಳಿಂದಾಗಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ಅವರ ವಿಚಾರಣೆಯನ್ನು ಭ್ರಷ್ಟಾಚಾರ ನಿಗ್ರಹ ದಳದ ಪೆÇಲೀಸರು ಇಂದು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಭಾರೀ ಭ್ರಷ್ಟಾಚಾರಗಳ ಆರೋಪಗಳಿಗೆ ಗುರಿಯಾಗಿದ್ದ ರಜಾಕ್ ಕಳೆದ ಎರಡು ವಾರಗಳ ಹಿಂದೆ ರಾಷ್ಟ್ರೀಯ ಚುನಾವಣೆಗಳಲ್ಲಿ ಪರಾಭವಗೊಂಡಿದ್ದರು. ಅವರು ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ ಮಲೇಷ್ಯಾ ಪೆÇಲೀಸರು ಅವರ ವಿರುದ್ದದ ಕ್ರಿಮಿನಲ್ ಆರೋಪ ಪ್ರಕರಣಗಳ ತನಿಖೆ ತೀವ್ರಗೊಳಿಸಿ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.
ಇಂದು ಕೂಡ ಅವರನ್ನು ವಿಚಾರಣೆಗೆ ಒಳಪಡಿಸಿ ಹಗರಣಕ್ಕೆ ಸಂಬಂಧಪಟ್ಟ ಮಹತ್ವದ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ