ಕಾಬೂಲ್, ಮೇ 22-ಹಿಂಸಾಚಾರದಿಂದ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ಪೂರ್ವ ಘಜ್ನಿ ಪ್ರಾಂತ್ಯದ ಜಿಲ್ಲೆಗಳಲ್ಲಿ ಬಂಡುಕೋರರು 14 ಪೆÇಲೀಸರ ನರಮೇದ ನಡೆಸಿದ್ದಾರೆ.
ದಿಹ್ ಯಾಕ್ ಹಾಗೂ ಜಘಾಟು ಜಿಲ್ಲೆಗಳ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿ ಪೆÇಲೀಸ್ ಮುಖ್ಯಸ್ಥ ಸೇರಿದಂತೆ 14 ಸಿಬ್ಬಂದಿಯನ್ನು ಕೊಂದಿದ್ದಾರೆ ಎಂದು ಪ್ರಾಂತೀಯ ಮಂಡಳಿ ಸದಸ್ಯ ಹಸನ್ ರೆಜಾ ಯೂಸೌಫಿ ಹೇಳಿದ್ದಾರೆ.
ನಿನ್ನೆ ರಾತ್ರಿಯಿಂದ ದಿಹ್ ಯಾಕ್, ಜಘಾಟು, ಅರ್ಜಿಸ್ತಾನ್ ಮತ್ತು ಖಾರಭಾಗ್ ಜಿಲ್ಲೆಗಳಲ್ಲಿ ತಾಲಿಬಾನ್ ಭಯೋತ್ಪಾದಕರು ನಡೆಸಿದ ಸರಣಿ ದಾಳಿಗಳಲ್ಲಿ 20 ಪೆÇಲೀಸರು ಸೇರಿದಂತೆ ಕೆಲವು ನಾಗರಿಕರೂ ಸಹ ಗಾಯಗೊಂಡಿದ್ದಾರೆ ಎಂದು ಘಜ್ನಿ ಪ್ರಾಂತೀಯ ಮಂಡಳಿ ಮುಖ್ಯಸ್ಥ ಲತಿಫಾ ಅಕ್ಬರಿ ತಿಳಿಸಿದ್ದಾರೆ.
ಆಫ್ಘಾನಿಸ್ತಾನದ ವಿವಿಧೆಡೆ ಪೆÇಲೀಸರು ಮತ್ತು ಯೋಧರನ್ನು ಗುರಿಯಾಗಿಟ್ಟುಕೊಂಡು ತಾಲಿಬಾನ್ ಬಂಡುಕೋರರು ನಡೆಸುತ್ತಿರುವ ದಾಳಿಗಳು ಸೇನಾಪಡೆಗಳಿಗೆ ತಲೆನೋವಾಗಿ ಪರಿಣಮಿಸಿದೆ.