ನಾಳೆ ಕಾಂಗ್ರೆಸ್- ಜೆಡಿಎಸ್​ ಮೈತ್ರಿ ಸರ್ಕಾರ ರಚನೆ: ಬಿಜೆಪಿಯಿಂದ ಕರಾಳ ದಿನ ಆಚರಣೆ

Bengaluru: BJP leaders B.S. Yeddyurappa and Ananth Kumar talk to the press after meeting Karnataka Governor Vajubhai Vala, in Bengaluru on May 16, 2018. (Photo: IANS)

ಬೆಂಗಳೂರು:ಮೇ-22: ನಾಳೆ ಕಾಂಗ್ರೆಸ್- ಜೆಡಿಎಸ್​ ಮೈತ್ರಿ ಸರ್ಕಾರ ರಚನೆಯಾಗಲಿರುವ ಹಿನ್ನೆಲೆಯಲ್ಲಿ ಮೇ 23ರಂದು ಬಿಜೆಪಿ ಕರಾಳ ದಿನ ಆಚರಣೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ನಾಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​.ಡಿ.ಕುಮಾರಸ್ವಾಮಿ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಬಿಜೆಪಿ ಕರಾಳದಿನ ಆಚರಣೆ ಮಾಡಲಿದೆ. ಬಿ.ಎಸ್​.ಯಡಿಯೂರಪ್ಪ ಕೂಡ ಭಾಗಿಯಾಗಲಿದ್ದಾರೆ. ಅಲ್ಲದೆ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲೂ ಬಿಜೆಪಿ ಕರಾಳ ದಿನ ಆಚರಣೆ ಮಾಡಲಿದೆ.

ಇನ್ನು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸದಂತೆ ಬಿಜೆಪಿ ಶಾಸಕರಿಗೆ, ನಾಯಕರಿಗೆ ಹೈಕಮಾಂಡ್‌ ಸೂಚಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿಗಳು ವರದಿ ಮಾಡಿವೆ. ಪ್ರಮಾಣವಚನ ಸಮಾರಂಭಕ್ಕೆ ಯಾರೂ ಹೋಗಬೇಡಿ. ತಟಸ್ಥವಾಗಿ ಇದ್ದುಕೊಂಡು ಎಲ್ಲವನ್ನೂ ಗಮನಿಸುತ್ತಿರಿ ಎಂದು ಹೈಕಮಾಂಡ್ ಸೂಚಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ