ಕಾರಾಕಾಸ್, ಮೇ 21-ವೆನಿಜುವೆಲಾದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಾಸ್ ಮಡುರೋ ಗೆಲುವು ಸಾಧಿಸಿದರು. ಚುನಾವಣೆ ಅಸಿಂಧು ಎಂದು ನಿರಾಕರಿಸಿ, ಹೊಸ ಜನಾದೇಶಕ್ಕೆ ಆಗ್ರಹಿಸಿದ್ದ ವಿರೋಧ ಪಕ್ಷಗಳಿಗೆ ಈ ಫಲಿತಾಂಶದಿಂದ ಭಾರೀ ಹಿನ್ನಡೆಯಾಗಿದೆ.
ಶೇಕಡ 90ಕ್ಕೂ ಹೆಚ್ಚು ಮತಗಳನ್ನು ಎಣಿಕೆ ಮಾಡಲಾಗಿದ್ದು, ಅಧ್ಯಕ್ಷ ಮಡುರೋ ಶೇ.67.7ರಷ್ಟು ಮತಗಳನ್ನು ಗಳಿಸಿದ್ದಾರೆ. ಇವರ ಪ್ರಮುಖ ಪ್ರತಿಸ್ಪರ್ಧಿ ಹೆನ್ರಿ ಫಾಲ್ಕನ್ ಕೇವಲ ಶೇ.21.2ರಷ್ಟು ಮತಗಳನ್ನು ಗಳಿಸಿ ಪರಾಭವಗೊಂಡರು. ವೆನಿಜುವೆಲಾ ಅಧ್ಯಕ್ಷರಾಗಿ ನಿಕೋಲಾಸ್ ಮಡುರೋ ಅವರು ಪುನರಾಯ್ಕೆಯಾಗಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯಸ್ಥ ಟಿಬಿಸೆ ಲುಸೆನಾ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.