
ಕೋಲ್ಕತಾ, ಮೇ 21-ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಇಂದು ಪಶ್ಚಿಮ ಬಂಗಾಳ ಅತ್ಯುನ್ನತ ನಾಗರಿಕ ಪುರಸ್ಕಾರ ಬಂಗ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ರಾಜಧಾನಿ ಕೋಲ್ಕತಾದಲ್ಲಿ ಇಂದು ಸಂಜೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಶಾ ಅವರಿಗೆ ಈ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಪ್ರದಾನ ಮಾಡುವರು. ಆಶಾ ಅವರೊಂದಿಗೆ ಬಂಗಾಳಿ ಸೂಪರ್ಸ್ಟಾರ್ ಪೆÇ್ರಸೆನ್ಜಿತ್ ಚಟರ್ಜಿ ಮತ್ತು ನಿವೃತ್ತ ನ್ಯಾಯಮೂರ್ತಿ ಶ್ಯಾಮಲ್ ಕುಮಾರ್ ಸೇನ್ ಅವರಿಗೂ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಖ್ಯಾತ ಲೇಖಕ ಸಮರೇಶ್ ಮಜುಮ್ದಾರ್ ಹಾಗೂ ಫುಟ್ಬಾಲ್ ಆಟಗಾರ ಸಬ್ರತಾ ಭಟ್ಟಾಚಾರ್ಯ ಅವರಿಗೆ ಬಂಗ ಭೂಷಣ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.