ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ:

ಬಾಲಸೋರ್, ಮೇ 21- ಅತ್ಯಂತ ನಿಖರ ಮತ್ತು ಆಕ್ರಮಣಕಾರಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯಲ್ಲಿ ಭಾರತ ಇಂದು ಯಶಸ್ವಿಯಾಗಿದೆ. ಇದರೊಂದಿಗೆ ದೇಶದ ಬತ್ತಳಿಕೆಗೆ ಅತ್ಯಂತ ಪ್ರಬಲ ಶಸ್ತ್ರಾಸ್ತ್ರವೊಂದು ಸೇರ್ಪಡೆಯಾದಂತಾಗಿದೆ.
ಒಡಿಶಾದ ಬಾಲಸೋರ್ ಕರಾವಳಿ ಪ್ರದೇಶದಲ್ಲಿ ಇಂದು ಸೂಪರ್ ಸಾನಿಕ್ ಕ್ಷಿಪಣಿ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ಅಂಗ ಸಂಸ್ಥೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‍ಡಿಒ) ಅಧಿಕಾರಿಗಳು ತಿಳಿಸಿದ್ದಾರೆ.
800ಕಿಮೀ ದೂರದ ವೈರಿ ಪಡೆ ಗುರಿಯನ್ನು ನಿಖರವಾಗಿ ತಲುಪಿ ಧ್ವಂಸಗೊಳಿಸುವ ಅಗಾಧ ಸಾಮಥ್ರ್ಯವನ್ನು ಬ್ರಹ್ಮೋಸ್ ಹೊಂದಿದೆ.
ಕಳೆದ ವರ್ಷ ಮಾರ್ಚ್‍ನಲ್ಲಿ ಮೊದಲ ಬಾರಿಗೆ ಈ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ನಿರೀಕ್ಷೆಗೂ ಮೀರಿದ ಸಾಮಥ್ರ್ಯದೊಂದಿಗೆ ಇದರ ಪ್ರಯೋಗ ಯಶಸ್ವಿಯಾಗಿತ್ತು.
ಯುದ್ಧ ವಿಮಾನಗಳಿಂದ ಈ ಕ್ಷಿಪಣಿಯನ್ನು ಗುರಿಯತ್ತ ನಿಖರವಾಗಿ ಉಡಾಯಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ