ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ: ಬಿಜೆಪಿ ಕಾರ್ಯಕರ್ತ ಹೃದಯಘಾತದಿಂದ ನಿಧನ

ದಾವಣಗೆರೆ,ಮೇ 20- ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರಗೊಂಡಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಹೃದಯಘಾತದಿಂದ ನಿಧನರಾಗಿದ್ದಾರೆ.
ತಾಲ್ಲೂಕಿನ ಹುಣಸೇಮರ ಗ್ರಾಮದ ಚನ್ನಬಸಪ್ಪ (75) ಮೃತಪಟ್ಟ ವ್ಯಕ್ತಿ.
ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿ, ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಚನ್ನಬಸಪ್ಪ , ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಸಿಗಲಿಲ್ಲವೆಂದು ಬೇಸರಗೊಂಡಿದ್ದರು. ಈ ಬಗ್ಗೆ ತಮ್ಮ ಸ್ನೇಹಿತರೊಂದಿಗೂ ಹೇಳಿಕೊಂಡಿದ್ದರು ಎನ್ನಲಾಗಿದೆ.
ನಿನ್ನೆ ಬೆಳಗ್ಗೆಯಿಂದ ಟಿವಿ ಮುಂದೆಯೇ ಕುಳಿತು ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ವೀಕ್ಷಿಸಿದ್ದರು. ಅತ್ಯಂತ ಬೇಸರಗೊಂಡಿದ್ದ ಚನ್ನಬಸಪ್ಪ ಅವರು ಹೃದಯಾಘಾತದಿಂದ ಅಸುನೀಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ