ಕೋಲಾರ, ಮೇ 20- ಪ್ರೇಮಿಗಳಿಬ್ಬರು ಅರಣ್ಯ ಪ್ರದೇಶದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಳಿಬಾಗಿಲು ತಾಲುಕಿನ ಕಾಮಸೇನಹಳ್ಳಿಯ ನಿವಾಸಿಗಳಾದ ಕೃಷ್ಣರೆಡ್ಡಿ (24) ಸುಜಾತಾ(22) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಈ ಹಿಂದೆ ಇಬ್ಬರು ಒಬ್ಬರನ್ನೊಬ್ಬರು ಪ್ರಿತಿಸುತ್ತಿದ್ದರು ಆದರೆ ಮನೆಯವರು ಒಪ್ಪಿಗೆ ನೀಡದ ಹಿನ್ನಲೆಯಲ್ಲಿ ಇಬ್ಬರು ಬೇರೆ ಬೇರೆ ಮದುವೆ ಆಗಿದ್ದರು ಎಂದು ಹೇಳಲಾಗಿದೆ.
ಮತದಾನದ ದಿನ ಇಬ್ಬರು ಮತದಾನ ಮಾಡಿ ನಂತರ ಗ್ರಾಮದ ಬಳಿಯ ಅರಣ್ಯದಲ್ಲಿ ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಇಂದು ಶವಗಳು ಪತ್ತೆಯಾಗಿದ್ದು ಸ್ಥಳಿಯರು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನೀಡಿದ ನಂಗಲಿ ಪೆÇಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.