
ವಿಜಯಪುರ,ಮೇ 20- ಕಳ್ಳರು ಏಳು ಮನೆಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸಿರುವ ಘಟನೆ ದೇವರ ಹಿಪ್ಪರಗಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿಂದಗಿ ತಾಲ್ಲೂಕಿನ ಚಿಕ್ಕರೂಗಿ ಗ್ರಾಮದ ಕೆಲ ನಿವಾಸಿಗಳು ಅತಿಯಾದ ಸೆಕೆಯಿಂದ ರಾತ್ರಿ ಮನೆಗೆ ಬೀಗ ಹಾಕಿ ಮನೆಯ ಮೇಲೆ ಮಲಗಿಕೊಂಡಿದ್ದಾರೆ.
ಇದನ್ನು ಕಂಡ ಕಳ್ಳರು ಬೀಗ ಹಾಕಿದ್ದ ಏಳು ಮನೆಗಳ ಬೀಗ ಮುರಿದು ಒಳನುಗ್ಗಿ ನಗನಾಣ್ಯಗಳನ್ನು ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ ಎದ್ದಾಗಲೇ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ದೇವರ ಹಿಪ್ಪರಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.