
ಸಿಯೋಲ್, ಮೇ 20-ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಎಲ್‍ಜಿ(ಲೈಫ್ಸ್ ಗುಡ್) ಸಮೂಹ ಸಂಸ್ಥೆಯ ಅಧ್ಯಕ್ಷ ಕೂ ಬೊನ್-ಮೂ (73) ನಿಧನರಾಗಿದ್ದಾರೆ.
ಗ್ರಾಹಕರ ಎಲೆಕ್ಟ್ರಾನಿಕ್ ವಸ್ತುಗಳು, ಡಿಸ್‍ಪ್ಲೇಗಳು ಮತ್ತು ರಾಸಾಯನಿಕ ವಸ್ತುಗಳ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಎಲ್‍ಜಿ ಕಂಪನಿಯ ವ್ಯವಹಾರ ಸಾಮ್ರಾಜ್ಯ ವಿಸ್ತರಣೆಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು.
1947ರಲ್ಲಿ ಕೂ ಬೋನ್-ಮೂ ಅವರ ತಾತಾ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯಸ್ಥರಾಗಿ ಮೂ ಕಳೆದ 20 ವರ್ಷಗಳಲ್ಲಿ ಸಂಸ್ಥೆಯ ಜನಪ್ರಿಯ ಉತ್ಪನ್ನಗಳ ಮಾರಾಟದಲ್ಲಿ ಗಮನಾರ್ಹ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್‍ಜಿ ಸಮೂಹ ಸಂಸ್ಥೆ ಕಳೆದ ವರ್ಷ 160 ಲಕ್ಷ ಕೋಟಿ ವೋನ್ (148 ಶತಕೋಟಿ ಡಾಲರ್) ಮಾರಾಟ ಆದಾಯ ಗಳಿಸಿರುವುದು ಈ ಸಂಸ್ಥೆಯ ಲೋಕಪ್ರಿಯತೆಗೆ ಸಾಕ್ಷಿಯಾಗಿದೆ.