ಭಾರತದ ಪ್ರಥಮ ದೇಶೀಯ ನಿರ್ಮಿತ ಆರ್ಟಿಲರಿ ಗನ್ (ಪಿರಂಗಿ) ಧನುಷ್ ಮುಂದಿನ ವಾರ ಪರೀಕ್ಷೆ:

ನವದೆಹಲಿ, ಮೇ 20- ಭಾರತದ ಪ್ರಥಮ ದೇಶೀಯ ನಿರ್ಮಿತ, ದೀರ್ಘ ಅಂತರದ ಆರ್ಟಿಲರಿ ಗನ್ (ಪಿರಂಗಿ) ಧನುಷ್ ಮುಂದಿನ ವಾರ ರಾಜಸ್ತಾನದ ಜೈಸಲ್ಮೆರ್‍ನ ಪೆÇೀಖ್ರಾನ್‍ನಲ್ಲಿ ಪರೀಕ್ಷೆಗೆ ಒಳಪಡಲಿದೆ.
ಧನುಷ್ ಫಿರಂಗಿಗಳನ್ನು ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ(ಒಎಫ್‍ಬಿ) ಅಭಿವೃದ್ದಿಗೊಳಿಸಿದ್ದು, ಜಬ್ಬಲ್‍ಪುರ ಮೂಲದ ಗನ್ ಕ್ಯಾರಿಯೇಜ್ ಫ್ಯಾಕ್ಟರಿ (ಜಿಎಸ್‍ಎಫ್) ತಯಾರಿಸಿದೆ.
ಭಾರತೀಯ ಸೇನಾ ಪಡೆಯ ತಾಂತ್ರಿಕ ಅಧಿಕಾರಿಗಳು ಮತ್ತು ಜಿಸಿಎಫ್ ತಜ್ಞರ ಸಮ್ಮುಖದಲ್ಲಿ ಫಿರಂಗಿಯಿಂದ ಗುಂಡು ಹಾರಿಸುವ ಮತ್ತು ಅದರ ದೂರ ಸಾಮಥ್ರ್ಯ ಪರೀಕ್ಷಾ ಪ್ರಯೋಗ ಮರುಭೂಮಿಯಲ್ಲಿ ನಡೆಯಲಿದೆ. ಮರುಭೂಮಿಯಂಥ ಕಠಿಣ ಮತ್ತು ಅತ್ಯಧಿಕ ಉಷ್ಣಾಂಶದ ಪ್ರದೇಶದಲ್ಲಿ ಧನುಷ್ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ.
ಐದು ವರ್ಷಗಳ ಹಿಂದೆಯೇ ಧನುಷ್‍ನನ್ನು ಪರೀಕ್ಷೆಗೆ ಒಳಪಡಿಸಬೇಕಿತ್ತು. ಆದರೆ ಮದ್ದುಗುಂಡುಗಳ ಬಳಕೆಯಲ್ಲಿ ಪ್ರಮುಖ ಸಮಸ್ಯೆ ಮತ್ತು ತಾಂತ್ರಿಕ ತೊಂದರೆಗಳು ಎದುರಾದ ಹಿನ್ನೆಲೆಯಲ್ಲಿ ದೀರ್ಘಕಾಲದ ಸಂಶೋಧನೆ ನಂತರ ಇದನ್ನು ಮುಂದಿನ ವಾರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ರಕ್ಷಣಾ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಧನುಷ್‍ನನ್ನು ಪರೀಕ್ಷೆಗೆ ಒಳಪಡಿಸಿದಾಗ ಫಿರಂಗಿಯ ನಳಿಗೆಯಲ್ಲೇ ಶೆಲ್(ಮದ್ದುಗುಂಡುಗಳ ತೋಪು) ಸ್ಫೋಟಗೊಂಡಿತ್ತು. ಆಗಿನಿಂದ ಮುಂದಿನ ಪ್ರಯೋಗವನ್ನು ಸ್ಥಗಿತಗೊಳಿಸಲಾಗಿತ್ತು. ಆದಾಗ್ಯೂ ಒಡಿಶಾದ ಬಾಲಸೋರ್ ವಲಯದಲ್ಲಿ ಯಶಸ್ವಿ ಮೇಲ್ದರ್ಜೆ ಪ್ರಯೋಗಗಳ ನಂತರ ಈಗ ಅಂತಿಮ ಪ್ರಯೋಗಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ