ವಿಮಾನ ಅಪಹರಿಸುವುದಾಗಿ ಬೆದರಿಕೆವೊಡ್ಡಿ ಆತಂಕದ ವಾತಾವರಣ ಸೃಷ್ಟಿ:

ನವದೆಹಲಿ, ಮೇ 20-ವಿಮಾನ ಅಪಹರಿಸುವುದಾಗಿ ಬೆದರಿಕೆವೊಡ್ಡಿ ಆತಂಕದ ವಾತಾವರಣ ಸೃಷ್ಟಿಸಿದ್ದ ಮುಂಬೈ ಮೂಲದ ಆಭರಣ ವ್ಯಾಪಾರಿ ಬಿರ್ಜು ಕಿಶೋರ್ ಸಲ್ಲಾ (37) ವಿಮಾನಯಾನ ನಿರ್ಬಂಧಕ್ಕೆ ಒಳಪಟ್ಟವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾನೆ.
ಕಳೆದ ವರ್ಷ ಅಕ್ಟೋಬರ್‍ನಲ್ಲಿ ಜೆಟ್ ಏರ್‍ವೇಸ್ ವಿಮಾನ ಹಾರುತ್ತಿದ್ದಾಗ ಈತ ಸಿಬ್ಬಂದಿ ಜೊತೆ ಜಗಳವಾಡಿ ಬಾಂಬ್ ಸ್ಪೋಟ ಮತ್ತು ಹೈಜಾಕ್ ಬೆದರಿಕೆಯೊಡ್ಡಿ ಭಯದ ವಾತಾವರಣ ನಿರ್ಮಿಸಿದ್ದ. ಈ ಪ್ರಕರಣ ನಡೆದ ಎಂಟು ತಿಂಗಳ ನಂತರ ಬಿಡುಗಡೆ ಮಾಡಲಾದ ನ್ಯಾಷನಲ್ ನೋ ಫ್ಲೈ ಲಿಸ್ಟ್ (ರಾಷ್ಟ್ರೀಯ ವಿಮಾನಯಾನ ನಿಷೇಧಕ್ಕೆ ಒಳಪಟ್ಟವರ ಪಟ್ಟಿ)ನಲ್ಲಿ ಬಿರ್ಜು ಮೊದಲ ಸ್ಥಾನದಲ್ಲಿದ್ದಾನೆ.
ಮುಂಬೈ-ದೆಹಲಿ ಜೆಟ್ ಏರ್‍ವೇಸ್‍ನಲ್ಲಿ ಈತ ಸೃಷ್ಟಿಸಿದ್ದ ಬೆದರಿಕೆ ರಾದ್ಧಾಂತದಿಂದ ಸಿಬ್ಬಂದಿ ವಿಮಾನವನ್ನು ಅಹಮದಾಬಾದ್‍ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದರು. ನಂತರ ಈತನನ್ನು ಪೆÇಲೀಸರು ಬಂಧಿಸಿದ್ದರು.
ಆಗಿನ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರ ಸಲಹೆ ಮೇರೆಗೆ ಈತನ ಹೆಸರನ್ನು ನ್ಯಾಷನಲ್ ನೋ ಫ್ಲೈ ಲಿಸ್ಟ್‍ಗೆ ಶಿಫಾರಸು ಮಾಡಲಾಗಿದ್ದು, ಈಗ ಜಾರಿಗೆ ಬಂದಿದೆ.
ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸುವ, ಜಗಳವಾಡುವ ಹಾಗೂ ಬೆದರಿಕೆಯೊಡ್ಡುವ ಪ್ರಕರಣಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರಯಾಣಿಕರ ವರ್ತನೆ ಆಧಾರದ ಮೇಲೆ ಅವರನ್ನು ಈ ವರ್ಗಗಳಲ್ಲಿ ನಿಷೇಧಕ್ಕೆ ಒಳಪಡಿಸುವ ನಿಬಂಧನೆ ಜಾರಿಗೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ