
ವಿಜಯಪುರ, ಮೇ 20- ಅರಣ್ಯಾಧಿಕಾರಿಗಳು, ಪೆÇಲೀಸರು ಭರ್ಜರಿ ಬೇಟೆಯಾಡಿ ಮರದ ದಿಮ್ಮಿ ತುಂಬಿದ್ದ ಐದು ಟ್ರ್ಯಾಕ್ಟರ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿಂದಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಅನಧಿಕೃತವಾಗಿ ವಿಜಯಪುರಕ್ಕೆ ಮರದ ದಿಮ್ಮಿಗಳನ್ನು ಸಾಗಿಸುವಾಗ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಬಿ.ಐ.ಬಿರಾದಾರ ನೇತೃತ್ವದ ವಲಯ ಅರಣ್ಯಾಧಿಕಾರಿಗಳ ತಂಡ ಈ ಮೊದಲು ದಾಳಿ ನಡೆಸಿತ್ತು. ಆದರೆ, ಇವರಿಗೆ ಬೆದರಿಕೆ ಹಾಕಿ ಲೋಡ್ ಸಮೇತ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈ ವಿಷಯ ತಿಳಿದು ಸಿಂದಗಿ ಸಿಪಿಐ ದ್ಯಾಮಣ್ಣ ಮತ್ತು ಸಿಬ್ಬಂದಿ ಸಿನಿಮೀಯ ರೀತಿಯಲ್ಲಿ ಟ್ರ್ಯಾಕ್ಟರ್‍ಗಳನ್ನು ಚೇಸ್ ಮಾಡಿ ಕನ್ನೊಳ್ಳಿ ಹತ್ತಿರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದೇವರಹಿಪ್ಪರಗಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.