
ಮೈಸೂರು,ಮೇ 20-ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮರವೊಂದು ಪೆÇಲೀಸ್ ಜೀಪ್ನ ಮೇಲೆ ಉರುಳಿಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಎಸಿಪಿ ಮತ್ತು ಸಿಬ್ಬಂದಿ ಪಾರಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ನಗರದ ಪೆÇಲೀಸ್ ಆಯುಕ್ತರನ್ನು ಭೇಟಿ ಮಾಡಲೆಂದು ಎನ್ ಆರ್ ವಿಭಾಗದ ಎಸಿಪಿ ಗೋಪಾಲ್, ಎಎಸ್ಐ ದೊರೆಸ್ವಾಮಿ ಹಾಗೂ ಮುಖ್ಯ ಪೇದೆ ಮಲ್ಲಿಕಾರ್ಜುನಪ್ಪ ಆಯುಕ್ತರ ಕಚೇರಿಗೆ ಬಂದಿದ್ದಾರೆ.
ಈ ವೇಳೆ ಗಾಳಿ ಸಹಿತ ಮಳೆ ಸುರಿಯಲಾರಂಭಿಸಿದೆ. ಇವರೆಲ್ಲರೂ ಮರದ ಕೆಳಗೆ ಜೀಪ್ನಲ್ಲಿಯೇ ಕುಳಿತಿರುವಾಗ ಜಿಪ್ನ ಮೇಲೆ ಮರ ಉರುಳಿಬಿದ್ದಿದೆ.
ತಕ್ಷಣವೇ ಎಸಿಪಿ ಗೋಪಾಲ್, ಎಎಸ್ಐ ದೊರೆಸ್ವಾಮಿ ಹಾಗೂ ಮುಖ್ಯಪೇದೆ ಮಲ್ಲಿಕಾರ್ಜುನಪ್ಪ ಅವರು ಜೀಪ್ ನಿಂದಿಳಿದು ಓಡಿಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ತೊಂದರೆಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೀಪ್ ನಜ್ಜುಗುಜ್ಜಾಗಿದೆ.