
ಬೀದರ್,ಮೇ 20- ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ ಯುವತಿ ಸಾವನ್ನಪ್ಪಿದ್ದು , 9 ಮಂದಿ ಗಾಯಗೊಂಡರುವ ಘಟನೆ ಹುಮ್ನಾಬಾದ್ನ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ನಡೆದಿದೆ.
ಸ್ವಾತಿ(24) ಮೃತಪಟ್ಟ ಯುವತಿ. ಸೋಲಾಪುರದಿಂದ ಹೈದರಾಬಾದ್ಗೆ ಹೋಗುತ್ತಿದ್ದಾಗ ಖಾಸಗಿ ಬಸ್ ಪಲ್ಟಿ ಹೊಡೆದ ಪರಿಣಾ ಈ ದುರಂತ ಸಂಭವಿಸಿದೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಆಗಮಿಸಿದ ಹುಮ್ನಾಬಾದ್ ಸಂಚಾರಿ ಠಾಣಾ ಪೆÇಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.