ನವದೆಹಲಿ, ಮೇ 17-ಕರ್ನಾಟಕದಲ್ಲಿ ಸರ್ಕಾರ ರಚಿಸಲು ಆಹ್ವಾನ ನೀಡಿರುವ ರಾಜ್ಯಪಾಲ ವಿ.ಆರ್.ವಾಲಾ ಅವರ ನಿರ್ಧಾರದ ವಿರುದ್ಧ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯಪಾಲರ ತೀರ್ಮಾನದ ವಿರುದ್ಧ ವೈಯಕ್ತಿಕ ಸಾಮಥ್ರ್ಯದ ಮೇಲೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಜೇಠ್ಮಲಾನಿ, ಗೌರ್ನರ್ ಅವರ ಆದೇಶವು ಸಂವಿಧಾನದ ಪರಮಾಧಿಕಾರವನ್ನು ಸಂಪೂರ್ಣ ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ನಾಳೆ ಸಂಬಂಧಪಟ್ಟ ಪೀಠದ ಮುಂದೆ ತಮ್ಮ ಮನವಿ ಅರ್ಜಿಯನ್ನು ಉಲ್ಲೇಖಿಸುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವು ಸೂಚನೆ ನೀಡಿದೆ. ಇದರೊಂದಿಗೆ ಕರ್ನಾಟಕ ರಾಜ್ಯ ರಾಜಕೀಯ ವಿದ್ಯಮಾನವು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದಂತಾಗಿದೆ.