
ಬೆಂಗಳೂರು,ಮೇ17-ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ತಿರುಪತಿಗೆ ತೆರಳಲಿದ್ದಾರೆ.
ನಾಳೆ ದೇವೇಗೌಡರಿಗೆ 86 ವರ್ಷದ ಜನ್ಮದಿನವಾಗಿದೆ. ಹುಟ್ಟುಹಬ್ಬದಂದು ತಿರುಪತಿಯ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ.
ಪ್ರತಿ ವರ್ಷ ಗೌಡರು ತಮ್ಮ ಹುಟ್ಟುಹಬ್ಬದಂದು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುವ ವಾಡಿಕೆಯನ್ನು ಇಟ್ಟುಕೊಂಡಿದ್ದು ,ಇಂದು ಸಂಜೆ ತಿರುಪತಿಗೆ ಪ್ರಯಾಣ ಬೆಳೆಸಲಿದ್ದಾರೆ.