ಜೂನ್ 28ರಂದು ಜಮ್ಮುವಿನಿಂದ 60 ದಿನಗಳ ಸುದೀರ್ಘ ಅಮರನಾಥ ಯಾತ್ರೆ ಆರಂಭ:

ಜಮ್ಮು, ಮೇ 16-ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ವಿಶ್ವವಿಖ್ಯಾತ ಅಮರನಾಥ ಗುಹಾಂತರ ದೇವಾಲಯಕ್ಕೆ ಪವಿತ್ರ ಯಾತ್ರೆ ಕೈಗೊಳ್ಳಲು ಈವರೆಗೆ ಸುಮಾರು 1.70 ಲಕ್ಷ ಯಾತ್ರಾರ್ಥಿಗಳು ಹೆಸರುಗಳನ್ನು ನೋಂದಾಯಿಸಿದ್ದಾರೆ. ಜೂನ್ 28ರಂದು ಜಮ್ಮುವಿನಿಂದ 60 ದಿನಗಳ ಸುದೀರ್ಘ ಅಮರನಾಥ ಯಾತ್ರೆ ಆರಂಭವಾಗಲಿದೆ.
ದೇಶಾದ್ಯಂತ ವಿವಿಧ ಕೌಂಟರ್‍ಗಳಲ್ಲಿ 1.69 ಲಕ್ಷ ಯಾತ್ರಿಕರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿದ್ದಾರೆ. 2,122 ವಿದೇಶ ಪ್ರವಾಸಿಗರಲ್ಲದೇ, 28,516 ಯಾತ್ರಿಗಳು ಹೆಲಿಕಾಪ್ಟರ್ ಮೂಲಕ ಪಯಣ ಕೈಗೊಳ್ಳಲು ತಮ್ಮ ಸ್ಥಾನಗಳನ್ನು ಕಾದಿರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 1ರಿಂದ ನೋಂದಣಿ ಆರಂಭವಾಗಿದ್ದು, ದೇಶಾದ್ಯಂತ ಭರದಿಂದ ನೋಂದಣಿ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜೂನ್ 28ರಂದು ಆರಂಭವಾಗುವ ಅಮರನಾಥ ಯಾತ್ರೆ ಆಗಸ್ಟ್ 26ರ ರP್ಷÁಬಂಧನ್ ದಿನದಂದು ಮುಕ್ತಾಯವಾಗಲಿದೆ.
ಬಿಜೆಪಿ ಸರ್ಕಾರ ಖಚಿತ : ವಿನಯ್ ಸಹಸ್ರಬುಡ್ಡೆ
ನ್ಯೂಯಾರ್ಕ್, ಮೇ 16-ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮ್ಮ ಪಕ್ಷ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುಡ್ಡೆ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.
ನ್ಯೂಯಾರ್ಕ್‍ನ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಜೈಪುರ್ ಫೂಟ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಖಚಿತ ಎಂದು ಹೇಳಿದರು.
ನಮ್ಮ ನಿರೀಕ್ಷೆಯಂತೆ ಕರ್ನಾಟಕ ಚುನಾವಣಾ ಫಲಿತಾಂಶ ಲಭಿಸಿದೆ. ನಾವು ಮತ್ತಷ್ಟು ಶ್ರಮ ವಹಿಸಿದ್ದರೆ ಇನ್ನೂ ಉತ್ತಮ ಫಲಿತಾಂಶ ಲಭಿಸುತ್ತಿತ್ತು. ಚುನಾವಣಾ ಫಲಿತಾಂಶದಲ್ಲಿ ಜನರ ಆಯ್ಕೆ ಏನೆಂಬುದು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ