ಭೋಪಾಲ್, ಮೇ 15-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ಈಗ ತನ್ನ ಹೆಸರನ್ನು ಕಾಂಗ್ರೆಸ್(ಪಿಎಂಪಿ) ಎಂದು ಹೆಸರು ಬದಲಾವಣೆ ಮಾಡಿಕೊಳ್ಳಬೇಕಿದೆ. ಏಕೆಂದರೆ ಆ ಪಕ್ಷ ಈಗ ಆಡಳಿತದಲ್ಲಿರುವುದು ಪಂಜಾಬ್, ಮಿಜೋರಾಂ ಮತ್ತು ಪುದುಚೇರಿಗಳಲ್ಲಿ(ಪಿಎಂಪಿ) ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಲೇವಡಿ ಮಾಡಿದ್ಧಾರೆ.
ಕರ್ನಾಟಕ ಚುನಾವಣೆ Àಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಈಗ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಅದು ಎಲ್ಲ ರಾಜ್ಯಗಳಲ್ಲೂ ಸೋಲುತ್ತಿದೆ. ಈಗ ದೇಶದಲ್ಲಿ ಮೂರು ಕಡೆ (ಪಿಎಂಪಿ) ಮಾತ್ರ ಕಾಂಗ್ರೆಸ್ ಆಡಳಿತವಿದೆ. ಮುಂದಿನ ದಿನಗಳಲ್ಲಿ ಅಲ್ಲೂ ಬಿಜೆಪಿ ಪ್ರಾಬಲ್ಯ ಸ್ಥಾಪಿಸಲಿದೆ ಎಂದು ಭವಿಷ್ಯ ನುಡಿದರು.
ಮೆಹಬೂಬಾ ಅಭಿನಂದನೆ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿರುವುದಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅಭಿನಂದನೆ ಸಲ್ಲಿಸಿದ್ದಾರೆ.