ಮುಂಬೈ, ಮೇ 15-ಮಹಾರಾಷ್ಟ್ರ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದನೆ ದಾಳಿಗೆ ಸಂಚು ರೂಪಿಸಿದ್ದ ಉಗ್ರನೊಬ್ಬನನ್ನು ಮುಂಬೈನಲ್ಲಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಬಂಧಿಸಿದೆ. ವೃತ್ತಿಯಲ್ಲಿ ತಂತ್ರಜ್ಞನಾದ ಜೋಗೀಶ್ವರಿ ನಿವಾಸಿ Éೈಸಲ್ ಮಿರ್ಜಾ(32) ಬಂಧಿತ ಭಯೋತ್ಪಾದಕ. ಮುಂಬೈನ ಪಶ್ಚಿಮ ಉಪ ಪಟ್ಟಣದಲ್ಲಿ ಈತನನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಗ್ರ ರಾಜಕೀಯ ಮುಖಂಡರು ಮತ್ತು ಬಾಲಿವುಡ್ ಖ್ಯಾತನಾಮರು ಈತನ ಗುರಿಯಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
Éೈಸನ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐಗೂ ಹಾಗೂ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್‍ಗೂ ನಿಕಟ ನಂಟಿದೆ ಎಂಬ ಅಂಶವನ್ನೂ ಈತ ಬಹಿರಂಗಗೊಳಿಸಿದ್ದಾನೆ.
ತಾನು ದಾವೂದ್‍ನ ಡಿ-ನೆಟ್‍ವರ್ಕ್‍ನೊಂದಿಗೆ ಸಂಪರ್ಕ ಹೊಂದಿದ್ದು, ಆತನ ಸದಸ್ಯರು ತನಗೆ ಶಾರ್ಜಾ ಮತ್ತು ದುಬೈನಲ್ಲಿ ಎಲ್ಲ ನೆರವು ನೀಡಿದ್ದರು. ಅಲ್ಲದೇ ಐಎಸ್‍ಐ ಅಣತಿಯಂತೆ ಕರಾಚಿಗೆ ತಾನು ಭೇಟಿ ನೀಡಲೂ ವ್ಯವಸ್ಥೆ ಮಾಡಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ವಿವಿಧ ರೀತಿಯ ರೈÀಲ್‍ಗಳಿಂದ ಗುಂಡು ಹಾರಿಸುವುದು ಹಾಗೂ ಚಾಕುವಿನಿಂದ ಗುಂಪಿನ ಮೇಲೆ ಎರಗಿ ಸಾಧ್ಯವಾದಷ್ಟು ಜನರನ್ನು ಕೊಲ್ಲುವ ಬಗ್ಗೆ ತಾನು ವಿಶೇಷ ತರಬೇತಿ ಪಡೆದಿದ್ದಾಗಿ ಆತ ಹೇಳಿದ್ಧಾನೆ. ಕರಾಚಿ ಸುತ್ತಮುತ್ತಲ ಅರಣ್ಯ ಪ್ರದೇಶಗಳು ಮತ್ತು ಕಣಿವೆಗಳಲ್ಲಿ ಇದಕ್ಕಾಗಿ ಉಗ್ರರಿಗೆ ತರಬೇತಿ ನೀಡುವ ಆರು ಶಿಬಿರಗಳಿವೆ ಎಂದು Éೈಸಲ್ ಮಾಹಿತಿ ನೀಡಿದ್ದಾನೆ.