ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಗೆ ಬಿಜೆಪಿ ತಾತ್ಕಾಲಿಕ ಬ್ರೇಕ್

ಬೆಂಗಳೂರು: ಮೇ-15: ಕಾಂಗ್ರೆಸ್ ಜೆಡಿಎಸ್ ಬೆಂಬಲಿಸಿ ಸರ್ಕಾರ ರಚಿಸುವ ಯತ್ನಕ್ಕೆ
ತಡೆಹಾಕಲು ಬಿಜೆಪಿ ಮುಂದಾಗಿದೆ. ಸುದೀರ್ಘ ಕಾಲ ಉನ್ನತ ನಾಯಕರೊಂದಿಗೆ ಚರ್ಚೆ ನಡೆಸಿದಬಿಜೆಪಿ
ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಕೇಂದ್ರ ಸಚಿವ
ಅನಂತ್ ಕುಮಾರ್, ಏಕೈಕ ದೊಡ್ಡಪಕ್ಷವಾಗಿರುವ ತಮಗೆ ಸರ್ಕಾರ ರಚಿಸಲು ಸಿದ್ಧತೆ ನಡೆಸಬೇಕೆಂದು
ತೀರ್ಮಾನಿನಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬಿಎಸ್ ವೈ ಹಾಗೂ ಸಚಿವ ಅನಂತಕುಮಾರ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ
ನಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಕೋರಲು ಇದೀಗ ರಾಜಭವನಕ್ಕೆ ತೆರಳಿದ್ದಾರೆ. ಈ
ಮೂಲಕ ಮ್ಯಾಜಿಕ್ ನಂ:112 ತಲುಪಲು ಒಂದಷ್ಟು ಸಮಯಾವಕಾಶ ಪಡೆಯುವ ಯೋಜನೆ ಇದಾಗಿದೆ. ಈ ಮಧ್ಯೆ
ಜೆಡಿಎಸ್ ಸಂಬಂಧ ವಲ್ಲದ ಕಾಂಗ್ರೆಸ್ ಶಾಸಕರು ಪ್ರವಾಸಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಆದರೆ ಏನೇ ಆದರೂ ಸರ್ಕಾರ ರಚಿಸಲೇಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ. ಈ ಮಧ್ಯೆ ಸಚಿವ
ಸದಾನಂದಗೌಡ ಸಭೆ ನಡುವೆ ಗಂಭೀರ ಚಿಂತನೆಯಲ್ಲಿಯೆ ತುರ್ತಾಗಿ ತೆರಳಿದ್ದು, ಕುತೂಹಲ ಕೆರಳಿತು.
ಅತ್ತ ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಆರ್ ಅಶೋಕ್ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು
ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ