ಬೆಂಗಳೂರಿನಲ್ಲಿ ಮತ ಎಣಿಕೆ ಹಿನ್ನಲೆ: ಪ್ರಮುಖಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧ

ಬೆಂಗಳೂರು:ಮೇ-15: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುವ ಮೌಂಟ್‌ ಕಾರ್ಮೆಲ್‌ ಕಾಲೇಜು, ಆರ್‌.ಸಿ ಕಾಲೇಜು, ಮಹಾರಾಣಿ ಕಾಲೇಜು, ಎಸ್‌.ಎಸ್‌.ಎಂ.ಆರ್‌.ವಿ ಕಾಲೇಜು ಸುತ್ತಲಿನ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ ನಿಷೇಧಿಸಲಾಗಿದೆ.

ಅಭ್ಯರ್ಥಿಗಳು, ಏಜೆಂಟರು, ಮತ ಎಣಿಕೆ ಅಧಿಕಾರಿಗಳಿಗೆ ಮತ ಎಣಿಕೆ ಕೇಂದ್ರದೊಳಗೆ ಪಾರ್ಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ. ಎಣಿಕೆ ಕೇಂದ್ರಕ್ಕೆ ಬರುವ ಪಕ್ಷಗಳ ಕಾರ್ಯಕರ್ತರಿಗೆ ಪಾರ್ಕಿಂಗ್‌ ಮಾಡಲು ಸಂಚಾರ ಪೊಲೀಸರು ಜಾಗ ಸೂಚಿಸಿದ್ದಾರೆ. ಮತ ಎಣಿಕೆ ಹಿನ್ನೆಲೆಯಲ್ಲಿ ಕೇಂದ್ರಗಳ ಸುತ್ತಲಿನ ರಸ್ತೆಗಳಲ್ಲಿ ಜನ ಮತ್ತು ವಾಹನ ದಟ್ಟಣೆ ಹೆಚ್ಚಿರುವ ಕಾರಣ ಸಾರ್ವಜನಿಕರು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ವಾಹನ ನಿಲುಗಡೆ ನಿಷೇಧ

* ಅರಮನೆ ರಸ್ತೆ- ಮೈಸೂರು ಬ್ಯಾಂಕ್‌ ವೃತ್ತದಿಂದ ವಸಂತನಗರ ರೈಲ್ವೆ ಸೇತುವೆವರೆಗೆ

* ಉದಯ ಟಿವಿ ಜಂಕ್ಷನ್‌ನಿಂದ – ವಸಂತನಗರ ರೈಲ್ವೆ ಸೇತುವೆವರೆಗೆ

* ರೇಸ್‌ ಕೋರ್ಸ್‌ ರಸ್ತೆ – ಬಸವೇಶ್ವರ ವೃತ್ತದಿಂದ ಖನಿಜ ಭವನ

* ಟಿ. ಚೌಡಯ್ಯ ರಸ್ತೆ – ಹಳೇ ಹೈಗ್ರೌಂಡ್ಸ್‌ ಠಾಣೆ ಜಂಕ್ಷನ್‌ನಿಂದ ವಿಂಡ್ಸರ್‌ ಮ್ಯಾನರ್‌ವರೆಗೆ

* ಶೇಷಾದ್ರಿ ರಸ್ತೆ – ಆನಂದ್‌ ರಾವ್‌ ವೃತ್ತದಿಂದ ಕೆ.ಆರ್‌ ವೃತ್ತದವರೆಗೆ

* ಜಯನಗರ 36ನೇ ಅಡ್ಡರಸ್ತೆ, ಈಸ್ಟ್‌ ಎಂಡ್‌ ರಸ್ತೆ, ಜಯನಗರ 18ನೇ ಮುಖ್ಯ ರಸ್ತೆ ನಡುವೆ

* ಜಯನಗರ 32ನೇ ಅಡ್ಡ ರಸ್ತೆ, ಈಸ್ಟ್‌ ಎಂಡ್‌ ರಸ್ತೆ, ಜಯನಗರ 18ನೇ ಮುಖ್ಯ ರಸ್ತೆ ನಡುವೆ

* ಜಯನಗರ 39ನೇ ಅಡ್ಡ ರಸ್ತೆ, ಈಸ್ಟ್‌ ಎಂಡ್‌ ರಸ್ತೆ, ಜಯನಗರ 18ನೇ ಮುಖ್ಯ ರಸ್ತೆ ನಡುವೆ

* ಜಯನಗರ 18ನೇ ಮುಖ್ಯ ರಸ್ತೆ, ಜಯನಗರ 46ನೇ ಅಡ್ಡ ರಸ್ತೆ, ಜಯನಗರ 18ನೇ ಮುಖ್ಯ ರಸ್ತೆ ನಡುವೆ

* ಜಯನಗರ 26ನೇ ಮುಖ್ಯ ರಸ್ತೆ, ಜಯನಗರ 46ನೇ ಅಡ್ಡ ರಸ್ತೆ, ತಿಲಕ ನಗರ ಮುಖ್ಯ ರಸ್ತೆ ನಡುವೆ

* ಜಯನಗರ 27ನೇ ಮುಖ್ಯ ರಸ್ತೆ, ಜಯನಗರ 46ನೇ ಅಡ್ಡ ರಸ್ತೆ, ತಿಲಕ ನಗರ ಮುಖ್ಯ ರಸ್ತೆ ನಡುವೆ

* ಈಸ್ಟ್‌ ಎಂಡ್‌ ಮುಖ್ಯ ರಸ್ತೆ, ಜಯನಗರ 46ನೇ ಅಡ್ಡ ರಸ್ತೆ, ತಿಲಕ ನಗರ ಮುಖ್ಯ ರಸ್ತೆ ನಡುವೆ

ವಾಹನ ನಿಲುಗಡೆ ಅವಕಾಶ

* ಅರಮನೆ ಮೈದಾನ

* ಸ್ವಾತಂತ್ರ್ಯ ಉದ್ಯಾನ ಆವರಣ

* ಸೆಂಟ್ರಲ್‌ ಕಾಲೇಜು ಆವರಣ

* ರೇಸ್‌ ಕೋರ್ಸ್‌ ರಸ್ತೆಯಲ್ಲಿ ಖನಿಜ ಭವನದಿಂದ ಮೌರ್ಯ ಹೊಟೇಲ್‌ವರೆಗೆ ರಸ್ತೆಯ ಒಂದು ಬದಿ

* ಟಿ. ಚೌಡಯ್ಯ ರಸ್ತೆಯಲ್ಲಿ ಎಲ್‌ಆರ್‌ಡಿಇಯಿಂದ ರಾಜಭವನವರೆಗೆ ರಸ್ತೆಯ ಒಂದು ಬದಿ (ಫೌಂಟೆನ್‌ ಕಡೆ)

* ಮಿಲ್ಲರ್‌ ರಸ್ತೆಯಲ್ಲಿ ಚಂದ್ರಿಕಾ ಜಂಕ್ಷನ್‌ನಿಂದ ಎಲ್‌ಆರ್‌ಡಿಇವರೆಗೆ

* 8ನೇ ಮೇನ್‌ ವಸಂತ ನಗರದಲ್ಲಿ ರಸ್ತೆಯ ಒಂದು ಬದಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ