ಜಿಲ್ಲೆಯಲ್ಲಿ ಮತದಾನ ಶಾಂತಯುತ: 110 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ

ಕೋಲಾರ, ಮೇ 13- ಜಿಲ್ಲೆಯಲ್ಲಿ ಮತದಾನ ಶಾಂತಯುತವಾಗಿ ನಡೆದಿದ್ದು, ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ 110 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಅರೆಸೈನಿಕರು ಭದ್ರತೆಯಲ್ಲಿ ಭದ್ರವಾಗಿದೆ. ಜಿಲ್ಲೆಯಲ್ಲಿ 81.36 ರಷ್ಟು ಮತದಾನವಾಗಿದೆ. ಜಿಲ್ಲೆಯ ಕೆಜಿಎಫ್(ಎಸ್ಸಿ) ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 72.86ರಷ್ಟು ಮತದಾನವಾಗಿದೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 88.48ರಷ್ಟು ಮತದಾನ ನಡೆದಿದೆ. ಮುಳಬಾಗಿಲು 79.89ರಷ್ಟು, ಕೆಜಿಎಫ್ 72.86, ಬಂಗಾರಪೇಟೆ 80.62, ಕೋಲಾರ 78.56, ಮಾಲೂರು 88.25ರಷ್ಟು ಮತದಾನ ನಡೆದಿದೆ. ಜಿಲ್ಲೆಯಲ್ಲಿ 4,95,321-ಪುರುಷರು, 4,77,391-ಮಹಿಳೆಯರು, ಇತರೆ 12 ಸೇರಿ ಪಟ್ಟು 9,72,724 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ