ಕಾಶ್ಮೀರ ಕಣಿವೆಯ ಬದ್‍ಗಾಂವ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮ:

ಶ್ರೀನಗರ, ಮೇ 12-ಕಾಶ್ಮೀರ ಕಣಿವೆಯ ಬದ್‍ಗಾಂವ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿ, ಕೆಲವರು ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬದ್‍ಗಾಂವ್‍ನಲ್ಲಿರುವ ಕಾವಲು ನೆಲೆ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ತೀವ್ರಗಾಯಗೊಂಡಿದ್ದ ಪೆÇಲೀಸ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಧ್ಯ ಕಾಶ್ಮೀರದ ವಾರ್ದ್‍ವಾನ್ ಸೇನಾ ಕಾವಲು ನೆಲೆ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಲಾಗಿದೆ. ಆದರೆ, ಆಕ್ರಮಣದಲ್ಲಿ ತೀವ್ರ ಗಾಯಗೊಂಡಿದ್ದ ಪೆÇಲೀಸ್ ಸಿಬ್ಬಂದಿ ಶಮೀನ್ ಅಹಮದ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಉನ್ನತ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್‍ಕೌಂಟರ್‍ನಲ್ಲಿ ಸಿಆರ್‍ಪಿಎಫ್ ಯೋಧ ಹುತಾತ್ಮ : ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಿನ್ನೆ ತಡರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಸಿಆರ್‍ಪಿಎಫ್ ಯೋಧ ಹುತಾತ್ಮರಾಗಿ, ಕೆಲವು ನಾಗರಿಕರು ಗಾಯಗೊಂಡಿದ್ದಾರೆ.
ಪಲ್ವಾಮದ ಮೊಹಲ್ಲಾ ಟಕಿಯಾದಲ್ಲಿನ ಚಿನಾರ್‍ಬಾಗ್‍ನಲ್ಲಿ ಭಯೋತ್ಪಾದಕರಿಗಾಗಿ ಸಿಆರ್‍ಪಿಎಫ್ ಯೋಧರು ಶೋಧ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಯೋಧರತ್ತ ಗುಂಡು ಹಾರಿಸಿದರು. ಎನ್‍ಕೌಂಟರ್‍ನಲ್ಲಿ ತೀವ್ರ ಗಾಯಗೊಂಡ ಮನ್‍ದೀಪ್ ಕುಮಾರ್ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟರು.
ಗುಂಡಿನ ಕಾಳಗದಲ್ಲಿ ಮನೆ ಮಾಲೀಕ ಬಷೀರ್ ಅಹಮದ್ ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ.
ಪರಾರಿಯಾಗಿರುವ ಭಯೋತ್ಪಾದಕರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ