ತುಮಕೂರು, ಮೇ 12- ಅನೈತಿಕ ಸಂಬಂಧ ಹೊಂದಿದ್ದ ಪತಿಯನ್ನು ಪತ್ನಿಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಳವನಹಳ್ಳಿ ಉಪ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭಕ್ತಹಳ್ಳಿಯ ಆಂಜಿನಪ್ಪ (40) ಕೊಲೆಯಾದ ದುರ್ದೈವಿ.
ಈತನ ಪತ್ನಿ ಯಶೋಧಮ್ಮ (37)ನನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಅನೈತಿಕ ಸಂಬಂಧ ಹಾಗೂ ಮನೆಗೆ ಕುಡಿದು ಬರುತ್ತಿದ್ದ ಗಂಡನೊಂದಿಗೆ ಪದೇ ಪದೇ ಪತ್ನಿ ಯಶೋಧಮ್ಮ ಜಗಳವಾಡುತ್ತಿದ್ದು, ನಿನ್ನೆ ರಾತ್ರಿಯೂ ಜಗಳವಾಡಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮಚ್ಚಿನಿಂದ ಕೊಚ್ಚಿ ಪತಿಯನ್ನು ಹತ್ಯೆಗೈದಿದ್ದಾಳೆ.
ಈ ಸಂಬಂಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣದ ವಿಚಾರಣೆ ಮುಂದುವರೆದಿದೆ ಎಂದು ಎಸ್ಪಿ ದಿವ್ಯಾಗೋಪಿನಾಥ್ ತಿಳಿಸಿದ್ದಾರೆ.