ಯಮಕನಮರಡಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಯ ಅಕ್ಕಪಕ್ಕ ಆಕ್ಷೇಪಾರ್ಹ ಗುರುತುಗಳು:

ಬೆಳಗಾವಿ,ಮೇ12- ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿಸಲ್ಪಟಿರುವ ಯಮಕನಮರಡಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಯ ಅಕ್ಕಪಕ್ಕ ಆಕ್ಷೇಪಾರ್ಹ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಗದ್ದಲ ಉಂಟಾದ ಪ್ರಸಂಗ ಉಂಟಾಗಿದೆ.
ಯಮಕನಮರಡಿ ಭರಮನಹಟ್ಟಿ ಗ್ರಾಮದ ಬೂತ್ ನಂ.218ರ ಮತಯಂತ್ರದಲ್ಲಿ ಯತೀಶ್ ಜಾರಕಿ ಹೊಳಿ ಅವರ ಹೆಸರಿನ ಅಕ್ಕಪಕ್ಕ ಮಸಿಯ ಗುರುತುಗಳು ಕಂಡುಬಂದಿದೆ.
ಇದನ್ನು ಗಮನಿಸಿದ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಮತದಾನ ಸ್ಥಗಿತಗೊಂಡಿತ್ತು.
ಕಾಂಗ್ರೆಸ್‍ನ ಕಾರ್ಯಕರ್ತರು ಬಿಜೆಪಿಯವರಿಗೆ ಪ್ರತ್ಯುತ್ತರ ನೀಡಿದ್ದರಿಂದ ಪರಿಸ್ಥಿತಿ ಕಾವೇರತೊಡಗಿತು. ಕೂಡಲೇ ಪೆÇಲೀಸರು ಮಧ್ಯಪ್ರವೇಶಿಸಿ ಎರಡು ಗುಂಪನ್ನು ಸಮಾಧಾನಪಡಿಸಿದರು.
ಮತ ಯಂತ್ರದಲ್ಲಿರುವ ಚಿಹ್ನೆ ಮತ್ತು ಅಕ್ಕಪಕ್ಕ ಮಸಿ ಇರುವ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರ ಗಮನಸೆಳೆಯಲಾಗುತ್ತಿದೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿಗಳು ಆಕ್ಷೇಪಾರ್ಹ ಗುರುತುಗಳನ್ನು ಅಳಿಸುವ ಮೂಲಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ