ಕೆಂಪು ಗ್ರಹ ಮಂಗಳಕ್ಕೆ ಪುಟ್ಟ ಹೆಲಿಕಾಪ್ಟರ್‍ನನ್ನು ಕಳುಹಿಸಲು ನಾಸಾ ಸಿದ್ಧತೆ:

ವಾಷಿಂಗ್ಟನ್, ಮೇ 12-ಕೆಂಪು ಗ್ರಹ ಮಂಗಳಕ್ಕೆ ಪುಟ್ಟ ಹೆಲಿಕಾಪ್ಟರ್‍ನನ್ನು ಕಳುಹಿಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಸಿದ್ಧತೆ ನಡೆಸುತ್ತಿದೆ.
ಮಂಗಳನ ಅಂಗಳಕ್ಕೆ ಅತ್ಯಾಧುನಿಕ ರೋವರ್ (ಬಾಹ್ಯಾಕಾಶ ಪುಟ್ಟ ನೌಕೆ) ಇರಿಸಲು ನಾಸಾದ 2020 ಮಿಷನ್ ಭಾಗವಾಗಿ ಮಾರ್ಸ್ ಪ್ಲಾನೆಟ್‍ಗೆ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್‍ನನ್ನು ರವಾನಿಸುವುದಾಗಿ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಅಂತರಿಕ್ಷದ ಗ್ರಹವೊಂದಕ್ಕೆ ಇಂಥ ಅತ್ಯಾಧುನಿಕ ನೌಕೆಯೊಂದನ್ನು ರವಾನಿಸುತ್ತಿರುವುದು ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಮೊದಲು.
ದೂರ ನಿಯಂತ್ರಿತ ಕೆಂಪುಗ್ರಹ ಹೆಲಿಕಾಪ್ಟರ್‍ನನ್ನು ನವೀನ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಎರಡು ಪ್ರತಿ ಪ್ರದಕ್ಷಿಣೆ ಬ್ಲೇಡ್‍ಗಳನ್ನು ಹೊಂದಿರುವ ಈ ಪುಟ್ಟ ನೌಕೆ ಮಂಗಳನ ತೆಳು ವಾತಾವರಣದಲ್ಲಿ ಹಾರಾಟ ನಡೆಸಿ ಅತ್ಯಾಧುನಿಕ ಸಂಶೋಧನೆಗೆ ನೆರವಾಗಲಿದೆ. ಇದರ ತೂಕ ಕೇವಲ ನಾಲ್ಕು ಪೌಂಡುಗಳು (1.8 ಕೆಜಿ). ಸಾಫ್ಟ್‍ಬಾಲ್ ಗ್ರಾತದಷ್ಟು ಅಳತೆಯ ಈ ಹೆಲಿಕಾಪ್ಟರ್‍ನ ಡಬಲ್ ಬ್ಲೇಡ್‍ಗಳು ಪ್ರತಿ ಗಂಟೆಗೆ ಬಹುತೇಕ 3,000 ಸುತ್ತುಗಳನ್ನು ಹಾಕುತ್ತದೆ. ಇದು ಭೂಮಿಯ ಮೇಲೆ ಹಾರಾಡುವ ಹೆಲಿಕಾಪ್ಟರ್‍ಗಳ ರೆಕ್ಕೆಗಳ ಪ್ರದಕ್ಷಿಣೆಗಿಂತಲೂ 10 ಪಟ್ಟು ಹೆಚ್ಚು.
ಭೂಮಿಯಿಂದ 40,000 ಅಡಿಗಳಷ್ಟು ಎತ್ತರದಲ್ಲಿ ಈ ಪುಟ್ಟ ಹೆಲಿಕಾಪ್ಟರ್ ಹಾರಾಟ ನಡೆಸಲಿದೆ. ಭೂಮಿಯ ವಾತಾವರಣಕ್ಕೆ ಹೋಲಿಸಿದರೆ, ಮಂಗಳ ಗ್ರಹದ ಪರಿಸರ ಪ್ರಮಾಣ ಕೇವಲ ಶೇಕಡ ಒಂದರಷ್ಟು. ಹೀಗಾಗಿ ನಮ್ಮ ಹೆಲಿಕಾಪ್ಟರ್ ರೆಡ್ ಪ್ಲಾನೆಟ್ ಮೇಲ್ಮೈ ಮೇಲೆ ಇದ್ದಾಗ ಅದು ಭೂಮಿಯ 1,00,000 ಅಡಿಗಳಷ್ಟು ಸಮಾನ ಎತ್ತರದಲ್ಲಿ ಇರುತ್ತದೆ ಎಂದು ನಾಸಾ ಜೆಟ್ ಪೆÇ್ರಪುಲ್ಷನ್ ಲ್ಯಾಬೋರೇಟರಿಯಲ್ಲಿನ ಮಾರ್ಸ್ ಹೆಲಿಕಾಪ್ಟರ್ ಯೋಜನೆ ವ್ಯವಸ್ಥಾಪಕ ಮಿಮಿ ಔಂಗ್ ವಿವರಿಸಿದ್ಧಾರೆ.
ಮಂಗಳನ ವಾತಾವರಣದಲ್ಲಿ ಇಂಥ ಪುಟ್ಟ ಹೆಲಿಕಾಪ್ಟರ್‍ಗಳ ಕಾರ್ಯಕ್ಷಮತೆ ಮತ್ತು ಪ್ರಯೋಜನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸುವುದು ಸಹ ಇದರ ಉದ್ದೇಶ ಎಂದು ನಾಸಾ ಆಡಳಿತಗಾರ ಜಿಮ್ ಬ್ರೈಡೆನ್‍ಸ್ಟೈನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ