
ಕೋಲಾರ, ಮೇ 12- ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮಹಿಳೆಯರಿಗೆ ಮೂಗುಬೊಟ್ಟು ಹಂಚುತ್ತಿದ್ದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೈದು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಮೂಗುಬೊಟ್ಟು ಹಂಚುತ್ತಿದ್ದುದು ಗೊತ್ತಾಗಿ ತಕ್ಷಣ ನಾಲ್ವರನ್ನು ವಶಕ್ಕೆ ಪಡೆದು ಅವರಿಂದ 190 ಮೂಗುಬೊಟ್ಟು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ಚೆಕ್ಪೆÇೀಸ್ಟ್ಗಳು, ಸಂಚಾರಿ ಜಾಗೃತ ದಳಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿವೆ. ನಿನ್ನೆ ರಾತ್ರಿ ಮಾಲೂರಿನಲ್ಲಿ ಎರಡು ಚೆಕ್ಪೆÇೀಸ್ಟ್ಗಳಲ್ಲಿ 1.8 ಲಕ್ಷ ಹಾಗೂ 2.8 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೋಹಿಣಿ ಕಟೋಚ್ ತಿಳಿಸಿದರು. ಶಾಂತಿಯುತ ಮತದಾನ ನಡೆದಿದೆ ಎಂದು ಹೇಳಿದರು.