ಬೆಳಗ್ಗೆ 6 ಗಂಟೆಗೆ ಅಣಕು ಮತದಾನದ ಮೂಲP ಮತದಾನಕ್ಕೆ ಚಾಲನೆ

ಬೆಂಗಳೂರು, ಮೇ 12-ಮತಯಂತ್ರಗಳ ತಾಂತ್ರಿಕ ಸಮಸ್ಯೆಯಿಂದಾಗಿ ಆರಂಭದಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಇನ್ಯಾವುದೇ ಗಂಭೀರ ಸಮಸ್ಯೆ ಎದುರಾಗದಂತೆ ಆಯೋಗ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆಯನ್ನು ಆಯೋಜಿಸಿತ್ತು.
ಇಂದು ಬೆಳಗ್ಗೆ 6 ಗಂಟೆಗೆ ಅಣಕು ಮತದಾನದ ಮೂಲಕವೇ ಮತದಾನಕ್ಕೆ ಚಾಲನೆ ದೊರೆಯಿತು. ಮತಗಟ್ಟೆ ಸಿಬ್ಬಂದಿಗಳ ಸಮ್ಮುಖದಲ್ಲಿ ಏಜೆಂಟರು ಸುಮಾರು 50 ಮತಗಳನ್ನು ಒಂದರ ಹಿಂದೆ ಒಂದರಂತೆ ಪರೀಕ್ಷಾರ್ಥವಾಗಿ ಚಲಾಯಿಸಿದರು.ತಾವು ಹಾಕಿದ ಮತ ಸರಿಯಾದ ವ್ಯಕ್ತಿಗೆ ತಲುಪಿದೆಯೇ ಎಂಬುದನ್ನು ವಿವಿ ಪ್ಯಾಟ್ ಮೂಲಕ ಖಚಿತಪಡಿಸಿಕೊಂಡರು. ನಂತರ 7 ಗಂಟೆಗೆ ಅಧಿಕೃತ ಮತದಾನ ಪ್ರಾರಂಭವಾಯಿತು.

ಪರದಾಡಿದ ಚುನಾವಣಾ ಸಿಬ್ಬಂದಿಗಳು:
ಮತದಾನಕ್ಕೆ ಸಿಬ್ಬಂದಿಗಳನ್ನು ಸಜ್ಜುಗೊಳಿಸಲು ಸಾಕಷ್ಟು ತರಬೇತಿಗಳನ್ನು ನೀಡಿದ್ದರೂ ಕೆಲವರು ಮತಯಂತ್ರಗಳ ಜೋಡಣೆಯಲ್ಲಿ ಗೊಂದಲ ಮಾಡಿಕೊಂಡಿದ್ದರಿಂದ ಇಂದು ಬೆಳಗ್ಗೆ ಬಹಳಷ್ಟು ಕಡೆ ತಾಂತ್ರಿಕ ಅಡಚಣೆ ಎದುರಾಗಿದೆ.

ನಿನ್ನೆ ಸಂಜೆ ಮತಯಂತ್ರಗಳ ಜೊತೆ ಎಲ್ಲಾ ಸಿಬ್ಬಂದಿಗಳು ಮತಗಟ್ಟೆಯನ್ನು ತಲುಪಿದ್ದರು. ಬಹಳಷ್ಟು ಮಂದಿ ನಿನ್ನೆ ರಾತ್ರಿಯೇ ಮತಯಂತ್ರಗಳನ್ನು ಜೋಡಿಸಿ ವ್ಯವಸ್ಥಿತವಾಗಿ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ಇನ್ನು ಕೆಲವರು ಮತಯಂತ್ರಗಳನ್ನು ಜೋಡಿಸಲಾಗದೆ ಸೆಕ್ಟರ್ ಸಹಾಯಕ ಸಿಬ್ಬಂದಿಗಳ ನೆರವು ಪಡೆದುಕೊಂಡರು.

ಎಲೆಕ್ಟ್ರಾನಿಕ್ ಮತಯಂತ್ರ ಮತ್ತು ಕಂಟ್ರೋಲ್ ಯೂನಿಟ್ ಜೊತೆಗೆ ವಿವಿಪ್ಯಾಟ್ ಯೂನಿಟ್‍ನ್ನು ಜೋಡಿಸಬೇಕಾದ್ದರಿಂದ ಕೆಲವು ಸಿಬ್ಬಂದಿಗಳು ಗಲಿಬಿಲಿಗೊಳಗಾದರು.
ಆರಂಭದ ಒಂದು ಗಂಟೆಯವರೆಗೂ ಚುನಾವಣಾ ಸಿಬ್ಬಂದಿಗಳಲ್ಲಿ ಆತಂಕದ ವಾತಾವರಣವೇ ಇತ್ತು. ಯಾವುದೇ ಸಮಸ್ಯೆ ಇಲ್ಲದೆ ಸರಾಗವಾಗಿ ಮತದಾನ ಮುಂದುವರೆದ ನಂತರ ಚುನಾವಣಾ ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟರು.

ಸಿಬ್ಬಂದಿಗಳಿಗೆ ಇಂದಿರಾ ಕ್ಯಾಂಟೀನ್ ಊಟ:
ಕೆಲವು ಮತಗಟ್ಟೆಗಳಲ್ಲಿ ಮೂಲಸೌಲಭ್ಯಗಳಿಲ್ಲದೆ ಸಿಬ್ಬಂದಿಗಳು ಸಮಸ್ಯೆ ಎದುರಿಸಿದರು. ಆಯೋಗ ನಿನ್ನೆಯಿಂದಲೂ ಚುನಾವಣಾ ಸಿಬ್ಬಂದಿಗಳಿಗೆ ಕಾ¯ಕಾಲಕ್ಕೆ ಊಟ, ತಿಂಡಿ ವ್ಯವಸ್ಥೆ ಮಾಡಿದೆ. ನಿನ್ನೆ ಮಧ್ಯಾಹ್ನ ಮಸ್ಟರಿಂಗ್ ಸೆಂಟರ್‍ನಲ್ಲಿ ಊಟ ಒದಗಿಸಲಾಗಿದೆ. ನಿನ್ನೆ ರಾತ್ರಿ ಮತಗಟ್ಟೆಗೆ ಊಟವನ್ನು ಪೂರೈಸಲಾಗಿತ್ತು. ಇಂದು ಬೆಳಗ್ಗೆ ಇಡ್ಲಿ, ಸಾಂಬಾರ್, ವಡೆ ಮತ್ತು ರೈಸ್‍ಬಾತ್ ಉಪಹಾರ ಪೂರೈಸಲಾಗಿತ್ತು. ಮಧ್ಯಾಹ್ನ ಅನ್ನ-ಸಾಂಬಾರ್ ಒದಗಿಸಲಾಗಿದೆ.
ರಿಯಾಯ್ತಿ ದರದಲ್ಲಿ ಬಡಜನರಿಗೆ ಊಟ-ತಿಂಡಿ ಪೂರೈಸುತ್ತಿದ್ದ ಇಂದಿರಾ ಕ್ಯಾಂಟೀನ್ ಸೇವೆಯನ್ನು ಚುನಾವಣಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದಿರಾ ಕ್ಯಾಂಟೀನ್ ಸೇವೆಯ ಮೂಲಕವೇ ಚುನಾವಣಾ ಸಿಬ್ಬಂದಿಗೆ ಊಟ-ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ