ನವದೆಹಲಿ, ಮೇ 12-ವೃದ್ಧ ಪೆÇೀಷಕರ(ತಂದೆ-ತಾಯಿ) ಮೇಲೆ ದೌರ್ಜನ್ಯ ನಡೆಸಿದರೆ ಅಥವಾ ಅವರನ್ನು ದೂರು ಮಾಡಿದರೆ ಅಂಥ ಮಕ್ಕಳು ಇನ್ನು ಮುಂದೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ..!
ವೃದ್ದ ತಂದೆ-ತಾಯಿಗಳನ್ನು ಮೂದಲಿಸುವುದು, ದ್ವೇಷಿಸುವುದು, ಕಿರುಕುಳ ನೀಡಿ ದೌರ್ಜನ್ಯ ಎಸಗುವುದು ಅಥವಾ ಅವರನ್ನು ದೂರ ಮಾಡುವುದು (ಪರಿತ್ಯಕ್ತಗೊಳಿಸುವುದು ಅಥವಾ ಅವರಿಂದ ಪ್ರತ್ಯೇಕವಾಗುವುದು) ಕಾನೂನಿನ ಪ್ರಕಾರ ಅಪರಾಧ. ಇಂಥ ಅಪರಾಧಗಳನ್ನು ಎಸಗುವವರಿಗೆ ಈಗಾಗಲೇ ಕಾನೂನಿನಲ್ಲಿ ಮೂರು ತಿಂಗಳ ಜೈಲುವಾಸ ಶಿಕ್ಷೆ ಇದೆ. ಆದರೆ ಇದನ್ನು ಆರು ತಿಂಗಳಿಗೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಪೆÇೀಷಕರು, ಹೆತ್ತವರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007ರ ಅಧಿನಿಯಮವನ್ನು ಪರಾಮರ್ಶಿಸುತ್ತಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಈ ನಿಯಮದ ಅಡಿಯಲ್ಲಿ ಬರುವ ವಿವಿಧ ಸಂಬಂಧಗಳ ಅರ್ಥ ಮತ್ತು ವ್ಯಾಖ್ಯಾನದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಸಹ ಸಚಿವಾಲಯ ಉದ್ದೇಶಿಸಿದೆ.