ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು ಪೆರು ಪ್ರವಾಸ:

ಲಿಮಾ, ಮೇ 12-ಪೆರು ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು, ಆ ದೇಶದ ಉನ್ನತ ನಾಯಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ್ದಾರೆ. ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯಗಳಿಗೆ 55 ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ನಾಯ್ಡು ಅವರ ಈ ಭೇಟಿ ಬಹು ಪ್ರಾಮುಖ್ಯತೆ ಪಡೆದುಕೊಂಡಿದೆ.
ರಾಜಧಾನಿ ಲಿಮಾದಲ್ಲಿ ಉಪ ರಾಷ್ಟ್ರಪತಿ ಅವರು ಪೆರು ಪ್ರಧಾನಮಂತ್ರಿ ಸೀಸರ್ ವಿಲ್ಲಾನ್ಯೂವಾ ಬರ್ಡಲೆಸ್, ವಿದೇಶಾಂಗ ಸಚಿವ ನೆಸ್ಟರ್ ಪೆÇಪೆÇ ಲಿಝಿಯೊ ಬರ್ಡಲೆಸ್, ಆರೋಗ್ಯ ಸಚಿವ ಸಿಲ್ವಿಯಾ ಪೆಸ್ಸಾ ಎಲಜೈ ಹಾಗೂ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಚಿವ ರೋಜರ್ ವೆಲಾನ್ಸಿಯಾ ಎಸ್ಪಿನೋಜಾ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದರು.
ಉತ್ತಮ ಗುಣಮಟ್ಟದ ಮತ್ತು ಅತ್ಯಂತ ಕಡಿಮೆ ಬೆಲೆಯ ಜನೌಷಧಗಳ ಪೂರೈಕೆ, ಮಾಹಿತಿ ತಂತ್ರಜ್ಞಾನ, ರಕ್ಷಣಾ ಉಪಕರಣಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಬ್ಯಾಹಾಕಾಶ ಸೌಲಭ್ಯಗಳ ವಿನಿಮಯದಲ್ಲಿ ಭಾರತದ ಸಹಕಾರ ಮತ್ತು ಸಾಮಥ್ರ್ಯದ ಬಗ್ಗೆ ನಿಯೋಗ ಮಟ್ಟದ ಮಾತುಕತೆ ವೇಳೆ ವೆಂಕಯ್ಯನಾಯ್ಡು ವಿವರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಭಾರತ ನೀಡುತ್ತಿರುವ ಸಹಕಾರವನ್ನು ಪೆರು ರಾಷ್ಟ್ರನಾಯಕರು ಪ್ರಶಂಸಿಸಿದರು.
ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯಗಳಿಗೆ 55 ವರ್ಷ ಪೂರ್ಣಗೊಂಡಿರುವ ಸುಸಂದರ್ಭದಲ್ಲಿ ಲಿಮಾದಲ್ಲಿ ನಿನ್ನೆ ವಿಶೇಷ ಕಾರ್ಯಕ್ರಮಗಳು ನಡೆದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ