ಅಥಣಿ, ಮೇ 12-ಮಾಜಿ ಸಚಿವ ಲಕ್ಷ್ಮಣ್ ಸವದಿ ಸಹೋದರನ ದರ್ಪವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಲಕ್ಷ್ಮಣ್ ಸವದಿ ಸಹೋದರ ಸಿದ್ದಾರೂಢ ರಡ್ಡೇರಹಳ್ಳಿಯಲ್ಲಿ 226ನೇ ಮತಗಟ್ಟೆಗೆ ಅಕ್ರಮವಾಗಿ ಪ್ರವೇಶಿಸಿ ಸುಮಾರು ಮೂರು ಗಂಟೆ ಕಾಲ ಒಳಗೆ ಇದ್ದರು. ಇದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧಾರೂಢರನ್ನು ಹೊರಗೆ ಕಳುಹಿಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಸಿದ್ಧಾರೂಢ ತಾನು ಮತಗಟ್ಟೆ ಏಜೆಂಟ್. ಅದಕ್ಕೆ ಒಳಗಿದ್ದೇನೆ ಎಂದು ಉಡಾಫೆಯಿಂದ ವರ್ತಿಸಿದರೆಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದು, ಕೂಡಲೇ ಅವರನ್ನು ಹೊರಗೆ ಕಳುಹಿಸಬೇಕು. ಇಲ್ಲದಿದ್ದರೆ ಮತದಾನ ನಿಲ್ಲಿಸಬೇಕೆಂದು ಪಟ್ಟು ಹಿಡಿದರು.
ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ತಕ್ಷಣ ಪೆÇಲೀಸರು ಮಧ್ಯಪ್ರವೇಶಿಸಿ ಸಿದ್ಧಾರೂಢನನ್ನು ಹೊರಗೆ ಕಳುಹಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಬಿಜೆಪಿಯವರು ದರ್ಪ ಮೆರೆಯುತ್ತಿದ್ದಾರೆ ಎಂದು ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.