ಯಾನ್‍ಗೊನ್, ಮೇ 12-ಮ್ಯಾನ್ಮಾರ್‍ನ ಉತ್ತರ ಶಾ ರಾಜ್ಯದ ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಬಂಡುಕೋರರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 19 ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ.
ದೇಶದ ಗಡಿ ಭಾಗದಲ್ಲಿ ಮ್ಯಾನ್ಮಾರ್ ಮಿಲಿಟರಿ ಮತ್ತು ಜನಾಂಗೀಯ ಶಸ್ತ್ರಸಜ್ಜಿತ ಗುಂಪಿನ ನಡುವೆ ಸಂಘರ್ಷ ತೀವ್ರಗೊಂಡಿರುವಾಗಲೇ ಸಾವು-ನೋವಿನ ವರದಿಯಾಗಿದೆ.
ಭೀಕರ ಕಾಳಗದಲ್ಲಿ ಕನಿಷ್ಟ 19 ಮಂದಿ ಮೃತಪಟ್ಟಿದ್ದು, 25ಕ್ಕೂ ಹಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ಹೇಳಿವೆ.