
ಬೆಂಗಳೂರು, ಮೇ12- ನಾನು ಯಾರು ಗೊತ್ತೆ? ನನಗೆ ನೀನು ಗುರುತಿನ ಚೀಟಿ ಕೇಳುತ್ತೀಯ? ನಿನಗೆಷ್ಟು ದುರಾಹಂಕಾರ..?
ಇದು ದಾವಣಗೆರೆ ಸಂಸದ ಸಿ.ಎಂ.ಸಿದ್ಧೇಶ್ವರ್ ಮತಗಟ್ಟೆ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿದ ಪರಿ.
ಇಲ್ಲಿನ ವಿದ್ಯಾಮಂದಿರದಲ್ಲಿ ಸಂಸದ ಸಿದ್ದರೇಶ್ವರ್ ಕುಟುಂಬ ಸಮೇತ ಮತ ಚಲಾಯಿಸಲು ಆಗಮಿಸಿದ್ದರು. ಎಲ್ಲರನ್ನೂ ಗುರುತಿನ ಚೀಟಿ ಕೇಳುವಂತೆ ಮತಗಟ್ಟೆ ಅಧಿಕಾರಿ ಸಿದ್ದೇಶ್ವರ್ ಅವರನ್ನೂ ನಿಮ್ಮ ಗುರುತಿನ ಚೀಟಿ ಕೊಡಿ ಎಂದು ಕೇಳಿದರು.
ಇದರಿಂದ ಕೆರಳಿದ ಸಿದ್ದೇಶ್ವರ್ ನಾನು ಯಾರು ನಿಮಗೆ ಗೊತ್ತಿಲ್ಲವೇ ನನ್ನನ್ನೇ ಗುರುತಿನ ಚೀಟಿ ಕೇಳುತ್ತೀಯ ಎಂದು ದಬಾಯಿಸಿದರು. ಸರ್ ಎಲ್ಲರಿಗೂ ಒಂದೇ ನಿಯಮ. ನಿಮ್ಮ ಹಕ್ಕು ಚಲಾಯಿಸುವಾಗ ಗುರುತಿನ ಚೀಟಿ ಕೇಳುವುದು ನಮ್ಮ ನಿಯಮ ಎಂದು ಅಧಿಕಾರಿ ಜಮಾಯಿಸಿದರು.