ಕೈಕೊಟ್ಟ ಮತಯಂತ್ರ: ರಾಜ್ಯದ ಹಲವೆಡೆ ವಿಳಂಬ ಮತದಾನ

ಬೆಂಗಳೂರು: ಮೇ-12: ರಾಜ್ಯ ವಿಧಾನಸಭಾ ಚುನಾವಣಾ ಮತದಾನ ಬಿರುಸಿನಿಂದ ಶಾಂತಿಯುತವಾಗಿ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದರೂ ರಾಜ್ಯದ ವಿವಿಡೆಡೆ ಮತಯಂತ್ರದಲ್ಲಿ ತಾಂತ್ರಿಕ ದೋಷ, ಹಲವೆಡೆ ವಿದ್ಯುತ್ ಸಮಸ್ಯೆ ಕಾರಣದಿಂದಾಗಿ ವಿಳಂಬವಾಗಿ ಮತದಾನ ಆರಂಭವಾಗಿದೆ.

ದಕ್ಷಿಣ ಕನ್ನಡದ ಉಪ್ಪಿನಂಗಡಿ, ಮುಂಡಾಜೆಯಲ್ಲಿ ತಡವಾಗಿ ಆರಂಭವಾದ ಮತದಾನ ಆರಂಭವಾಯಿತು.ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಮತ ಯಂತ್ರಗಳಲ್ಲಿ ದೋಷ ಕಂಡುಬಂದಿದೆ.

ಉಪ್ಪಿನಂಗಡಿ ಒಂದನೇ ವಾರ್ಡ್‌ನ ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡುಬಂದ ಪರಿಣಾಮ ಮತ ಯಂತ್ರವನ್ನು ಬದಲಾಯಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ನಿಟ್ಟಿನಲ್ಲಿ ಮತದಾನ ಪ್ರಕ್ರಿಯೆ ಒಂದು ಗಂಟೆ ವಿಳಂಬವಾಗಿ ಆರಂಭವಾಗಿದೆ.ಇದರಿಂದ ಮತದಾನಕ್ಕಾಗಿ ಕಾದು ಕಾದು ಮತಗಟ್ಟೆಯಿಂದ ಹಿಂತಿರುಗಿದ ಮತದಾರರು ವಿಳಂಬವಾಗಿ ಮತದಾನ ಆರಂಭವಾಗಿದ್ದರಿಂದ ಮತದಾರರು ಒಂದು ಗಂಟೆ ಹೆಚ್ಚುವರಿ ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು

ಮುಂಡಾಜೆ ಮೂರನೇ ವಾರ್ಡ್‌ನಲ್ಲೂ ಮತಯಂತ್ರದ ತೊಂದರೆಯಿಂದಾಗಿ ಅರ್ಧ ಗಂಟೆ ತಡವಾಗಿ ಮತದಾನ ಆರಂಭವಾಯಿತು.

ಗದಗ ಜಿಲ್ಲೆಯ ರೋಣ ಪಟ್ಟಣದ ಮತಗಟ್ಟೆ ಸಂಖ್ಯೆ ೧೧೭ ರಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದ ಕಾರಣ ಮತದಾನ ಅರ್ಧ ಗಂಟೆ ತಡವಾಗಿ ಆರಂಭವಾಗಿದೆ.

ಮತಯಂತ್ರದಲ್ಲಿ ಸಮಸ್ಯೆಉಂಟಾದ ಹಿನ್ನಲೆಯಲ್ಲಿ ಮತದಾನ ವಿಳಂಬ ವಾಗುತ್ತಿದ್ದಂತೆ ಆಕ್ರೋಶಗೊಂಡ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಹುಬ್ಬಳ್ಳಿಯ ಭವಾನಿ ನಗರದಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಕ್ಯೂನಲ್ಲಿ ಕಾಯ್ದುನಿಂತ ಮತದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಲ್ಯಾಮಿಂಗ್ಟನ್ ಶಾಲೆಯ ಮತಗಟ್ಟೆ ಸಂಖ್ಯೆ 185ರಲ್ಲಿರುವ ಮತಯಂತ್ರ ಮತ್ತು ವಿವಿಪ್ಯಾಟ್ ನಲ್ಲಿ ತೊಂದರೆ ಕಂಡುಬಂದಿದೆ. ಇದರಿಂದ ಮತದಾನ ವಿಳಂಬವಾಯಿತು.

ಈ ವೇಳೆ ಮತದಾನಕ್ಕಾಗಿ ಸಂಸದ ಪ್ರಲ್ಹಾದ್ ಜೋಶಿ‌. ಕುಟುಂಬಸಹಿತ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ