ವಿಧಾನಸಭೆ ಚುನಾವಣೆಯ ಬಹಿರಂಗ ಮತಯಾಚನೆ ಅಂತ್ಯ: ಕೊನೆ ಕ್ಷಣದಲ್ಲಿ ಮೊಬೈಲ್, ಎಸ್‍ಎಂಎಸ್, ಫೇಸ್‍ಬುಕ್, ವಾಟ್ಸಾಪ್‍ಗಳ ಮೂಲಕ ಮತದಾರರಿಗೆ ಮನವಿ

ಬೆಂಗಳೂರು, ಮೇ 11- ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಮತಯಾಚನೆ ಅಂತ್ಯವಾಗಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯರ್ಥಿಗಳು ಮತದಾರರ ಮನವೊಲಿಸುವ ತಮ್ಮ ಕೊನೆ ಕ್ಷಣದ ಕಸರತ್ತನ್ನು ಮುಂದುವರಿಸಿದ್ದು, ಮೊಬೈಲ್, ಎಸ್‍ಎಂಎಸ್, ಫೇಸ್‍ಬುಕ್, ವಾಟ್ಸಾಪ್‍ಗಳ ಮೂಲಕ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.

ಭಾರೀ ಬಹಿರಂಗ ಸಭೆ, ರೋಡ್ ಶೋ, ಪಾದಯಾತ್ರೆ, ರ್ಯಾಲಿ, ಮನೆ ಮನೆಗೆ ತೆರಳಿ ಮತಯಾಚನೆ ಎಲ್ಲವೂ ಮುಗಿದಿದ್ದು, ಈಗ ಎಸ್‍ಎಂಎಸ್‍ಗಳ ಮೂಲಕ ಇಂಟರ್‍ನೆಟ್, ಫೇಸ್‍ಬುಕ್, ಮೈಲ್, ವಾಟ್ಸಾಪ್‍ಗಳನ್ನು ಬಳಸಿಕೊಂಡು ಕೊನೆ ಕ್ಷಣದ ಮತಯಾಚನೆ ಮಾಡುತ್ತಿದ್ದಾರೆ.
ಅಲ್ಲದೆ, ಮೊಬೈಲ್‍ನಲ್ಲಿ ವಾಯ್ಸ್ ಸಂದೇಶ, ಮತದಾನಕ್ಕೆ ತಮ್ಮ ಪಕ್ಷದ ನಾಯಕರುಗಳ ಮೂಲಕ ಮನವಿ ಮಾಡಿಸುವುದು, ತಮಗೆ ವೋಟ್ ನೀಡುವಂತೆ ಮನವಿ ಮಾಡಿ ವಾಟ್ಸಾಪ್, ಫೇಸ್‍ಬುಕ್‍ಗಳಿಗೆ ರವಾನಿಸುವುದು, ಟಿವಿ ಮಾಧ್ಯಮಗಳಲ್ಲಿ ಮನವಿ ಮಾಡುತ್ತಿದ್ದಾರೆ.

ಒಟ್ಟಾರೆ ಕೊನೆ ಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಜೋರಾಗಿಯೇ ಆಗುತ್ತಿದೆ. ಪರಸ್ಪರ ಆರೋಪ-ಪ್ರತ್ಯಾರೋಪ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ರಾಜಕೀಯ ಪಕ್ಷಗಳು ಮಾಡುತ್ತಿದ್ದವು. ಈಗ ಕೊನೆ ಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮತದಾನಕ್ಕೆ ಮನವಿ ಮಾಡುತ್ತಿರುವುದು ಜೋರಾಗಿ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ