ಬೆಂಗಳೂರು, ಮೇ 11- ಮಂಡ್ಯ ವಲಯದ ಹುಲಿಕೆರೆ ಲೋಯೆರ್ ಬ್ಲಾಕ್ ಗಸ್ತಿನಲ್ಲಿ ರಕ್ತಚಂದನ ಮರಗಳ ಅಕ್ರಮ ಕಡಿತ, ಕಳ್ಳ ಸಾಗಾಣಿಕೆ ಆರೋಪಗಳಿಗೆ ಸಂಬಂಧಿಸಿದಂತೆ ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಜಾಫರ್ ಮತ್ತು ಇತರೆ 12 ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ವಿಚಾರಣಾಧಿಕಾರಿಯಾಗಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕೆಡ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಇಲಾಖಾ ವಿಚಾರಣಾಧಿಕಾರಿಯಾಗಿ ಸಿ.ಜಯರಾಂ ಅವರನ್ನು ಈ ಹಿಂದೆ ನೇಮಕ ಮಾಡಲಾಗಿತ್ತು. ಸುಭಾಷ್ ಅವರನ್ನು ನೂತನವಾಗಿ ವಿಚರಣಾಧಿಕಾರಿಯಾಗಿ ನೇಮಕ ಮಾಡಿದ್ದು, ಮೂರು ತಿಂಗಳ ಕಾಲ ಮಿತಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ಸೂಕ್ತ ನಿರ್ಣಯದ ಸಹಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.