ನವದೆಹಲಿ,ಮೇ11- ಮಗುವಿಗೆ ಹೆಸರಿಡುವ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ ಅಂತರ್ ಧರ್ಮೀಯ ದಂಪತಿಯ ಮಗುವಿಗೆ ನ್ಯಾಯಾಧೀಶರೇ ಹೆಸರು ಇಟ್ಟಿರುವ ಪ್ರಸಂಗ ನಡೆದಿದೆ.
ಹಿಂದು ಮತ್ತು ಕ್ರೈಸ್ತ ಧರ್ಮದ ದಂಪತಿ ಮಧ್ಯೆ ತಮ್ಮ ಎರಡನೇ ಮಗುವಿಗೆ ಹೆಸರು ನೀಡುವ ವಿಚಾರದಲ್ಲಿ ಜಗಳವಾಡಿಕೊಂಡಿದ್ದರು. ಮಗುವಿಗೆ ಹೆಸರಿಡುವ ವಿಚಾರದಲ್ಲಿ ದಂಪತಿ ಒಮ್ಮತಕ್ಕೆ ಬಾರದೇ ಇದ್ದುದ್ದರಿಂದ ನಗರಪಾಲಿಕೆ ಜನನ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು.
ಮಗುವಿಗೆ ಜಾನ್ ಮಣಿ ಸಚಿನ್ ಎಂಬ ಹೆಸರಿಡಬೇಕು ಎಂಬುದು ತಾಯಿಯ ಇಚ್ಛೆಯಾಗಿದ್ದರೆ, ಅಭಿನವ್ ಸಚಿನ್ ಎಂದು ಹೆಸರಿಡಬೇಕು ಎಂಬುದು ತಂದೆಯ ಬೇಡಿಕೆಯಾಗಿತ್ತು.
ಕೊನೆಗೆ ಇಬ್ಬರ ಹೆಸರನ್ನು ಪರಿಗಣಿಸಿದ ಕೇರಳ ಹೈಕೋರ್ಟ್ ನ್ಯಾಯಾಧೀಶರು ಮಗುವಿಗೆ ಜಾನ್ ಸಚಿನ್ ಎಂಬ ಹೆಸರನ್ನು ಸೂಚಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಿದರು.