ನವದೆಹಲಿ, ಮೇ 11- ಅಧಿಕಾರದ ಗದ್ದುಗೆಗೇರಿದ ಮಲೇಷಿಯಾ ಪ್ರಧಾನಮಂತ್ರಿ ಮಹತೀರ್ ಮೊಹಮ್ಮದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಮ್ಮ ಎರಡೂ ದೇಶಗಳ ನಡುವೆ ಉತ್ತಮ ಬಾಂಧವ್ಯ, ಪರಸ್ಪರ ಹೊಂದಾಣಿಕೆ, ಮೈತ್ರಿ ವೃದ್ಧಿಯಾಗಲಿ, ನಿಮಗೆ ಶುಭಕೋರುವೆ ಎಂದು ಮೋದಿ ಟ್ವೀಟ್ ಮಾಡಿ ಮಹತೀರ್ಗೆ ಹಾರೈಸಿದ್ದಾರೆ. ಮಹತೀರ್(92) ನಿನ್ನೆಯಷ್ಟೇ ಮಲೇಷಿಯಾದ ಏಳನೆ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ವಿಶ್ವದ ಅತ್ಯಂತ ಹಿರಿಯ ನಾಯಕನೆಂದು ಬಣ್ಣಿಸಲಾಗಿದೆ.