ಶಾಂತಿಯುತ ಮತದಾನಕ್ಕೆ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪೆÇಲೀಸರ ನಿಯೋಜನೆ

ಬೆಂಗಳೂರು, ಮೇ 11- ಶಾಂತಿಯುತ ಮತದಾನಕ್ಕೆ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪೆÇಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಿರ್ಭೀತಿಯಿಂದ ಮತಗಟ್ಟೆಗೆ ತೆರಳಿ ಮುಕ್ತವಾಗಿ ಮತ ಚಲಾಯಿಸುವಂತೆ ನಗರ ಪೆÇಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್ ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆಯಕಟ್ಟಿನ ಪ್ರದೇಶಗಳಲ್ಲಿ ಪೆÇಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಸಮಸ್ಯೆ ಎದುರಾದರೆ ಕೂಡಲೇ ಮತದಾರರು ಪೆÇಲೀಸ್ ನಿಯಂತ್ರಣ ಕೊಠಡಿ ಅಥವಾ ಹಿರಿಯ ಅಧಿಕಾರಿಗಳ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು ಎಂದು ಸುನಿಲ್‍ಕುಮಾರ್ ತಿಳಿಸಿದ್ದಾರೆ.
10,500 ಸಿವಿಲ್ ಪೆÇಲೀಸ್, 44 ಕಂಪೆನಿ ಕೇಂದ್ರ ಪಡೆ, 35 ತುಕಡಿ ಕೆಎಸ್‍ಆರ್‍ಪಿ, ಗೃಹ ರಕ್ಷಕ ದಳ ಮತ್ತು ಸಿವಿಲ್ ಡಿಫೆನ್ಸ್‍ನ 2500 ಸಿಬ್ಬಂದಿಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಹೇಳಿದರು.

18 ಮಂದಿ ಡಿಸಿಪಿ, 50 ಎಸಿಪಿ, 4 ಮಂದಿ ಹೆಚ್ಚುವರಿ ಪೆÇಲೀಸ್ ಆಯುಕ್ತರು ಹಾಗೂ ಒಬ್ಬರು ಜಂಟಿ ಆಯುಕ್ತರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಅವರುಗಳು ನಗರದಾದ್ಯಂತ ಗಸ್ತಿನಲ್ಲಿರುತ್ತಾರೆ.

ಇದರ ಜತೆಗೆ 15 ರಿಂದ 20 ಮತಗಟ್ಟೆಗೆ ಒಂದು ಮೊಬೈಲ್ ಸ್ಕ್ವಾಡ್ ರಚನೆ ಮಾಡಲಾಗಿದೆ. ಒಟ್ಟಾರೆ 400 ಮೊಬೈಲ್ ಸ್ಕ್ವಾಡ್ ರಚಿಸಲಾಗಿದ್ದು, 4 ಮೊಬೈಲ್ ಸ್ಕ್ವಾಡ್‍ಗಳ ಉಸ್ತುವಾರಿಗೆ ಒಂದು ಸೂಪರ್ ಮೊಬೈಲ್ ಸ್ಕ್ವಾಡ್ ರಚಿಸಲಾಗಿದೆ ಎಂದು ಸುನಿಲ್‍ಕುಮಾರ್ ಹೇಳಿದರು.
ನಗರ ಪೆÇಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ 7477 ಮತಗಟ್ಟೆಗಳಿದ್ದು, ಇವುಗಳಲ್ಲಿ 1469 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಒಂದೇ ಕಟ್ಟಡದಲ್ಲಿ 5 ಮತಗಟ್ಟೆಗಳಿದ್ದರೆ ಅಂತಹ ಮತದಾನ ಕೇಂದ್ರಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.
31 ಕೋಟಿ ಮೌಲ್ಯದ ವಸ್ತು ವಶ: ನಗರ ವ್ಯಾಪ್ತಿಯಲ್ಲಿ ಇದುವರೆಗೂ ಚುನಾವಣೆಗೆ ಸಂಬಂಧಿಸಿದ 184 ಪ್ರಕರಣಗಳನ್ನು ದಾಖಲಿಸಲಾಗಿದೆ.
12 ಕೋಟಿ ನಗದು, 19 ಕೋಟಿ ಮೌಲ್ಯದ ಚಿನ್ನ, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ನಗದು ಸೇರಿದಂತೆ ಒಟ್ಟು 31 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತ ಸುನಿಲ್‍ಕುಮಾರ್ ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ